ಬೆಂಕಿ ಆಕಸ್ಮಿಕ: 2 ಹಸು ಸಾವು
ಹರಿಹರ: ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಕೆಪಿಟಿಸಿಎಲ್ ಗ್ರೀಡ್ ಬಳಿ ಇರುವ ತೋಟದಲ್ಲಿ ಸಂಗ್ರಹಿಸಿದ್ದ ಹುಲ್ಲಿನ ಬಣವೆ ಮತ್ತು ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 2 ಜರ್ಸಿ ಆಕಳು ಸೇರಿದಂತೆ 11 ಲೋಡ್ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟ ಪರಿಣಾಮ ಸುಮಾರು 1.50 ಲಕ್ಷ ನಷ್ಟವಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.