ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲಾಂಚ್ ಪ್ರಯಾಣಿಕರ ಟಿಕೆಟ್ ಲೋಪ ಸರಿಪಡಿಸಲು ಒತ್ತಾಯ

Rashmi Kasaragodu
Updated On : 21 Mar 2014, 12:01 pm

ಸಾಗರ: ತಾಲೂಕಿನ ಹಸಿರುಮಕ್ಕಿ ಕಡವಿನಲ್ಲಿ ಲಾಂಚ್ ಪ್ರಯಾಣಿಕರಿಗೆ ನೀಡುವ ಟಿಕೆಟ್ ಸೂಕ್ತವಾಗಿಲ್ಲ ಎಂದು ಸಾರ್ವ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಸಿರುಮಕ್ಕಿಯಿಂದ ಶರಾವತಿ ಹಿನ್ನೀರು ದಾಟಿ ಹೊಸನಗರ ತಾಲೂಕು ಕೆ.ಬಿ.ಸರ್ಕಲ್ ರಸ್ತೆ ಸೇರುವಲ್ಲಿ ಪ್ರಯಾಣಿಕರಿಗೆ ಮತ್ತು ವಾಹನಗಳಿಗೆ ನೀಡುವ ಟಿಕೆಟ್ ನೀಡುವಲ್ಲಿ ಲೋಪವಾಗುತ್ತಿದೆ. ಇಲ್ಲಿ ವಿತರಿಸುವ ಟಿಕೆಟ್ ವಾಸ್ತವವಾಗಿ ಸಾಗರ ತಾಲೂಕು ಅಂಬಾರಗೋಡ್ಲು- ಕಳಸವಳ್ಳಿ ಪ್ರಯಾಣಕ್ಕೆ ನೀಡುವ ಟಿಕೆಟ್ ಆಗಿದೆ ಎಂದು ಆಕ್ಷೇಪಿಸಿದ್ದಾರೆ. ಇದರಿಂದಾಗಿ ವಾಸ್ತವದಲ್ಲಿ ಹಸಿರುಮಕ್ಕಿ ಕಡವಿನಲ್ಲಿ ನದಿ ದಾಟುವವರ ಲೆಕ್ಕವೂ ಕಳಸವಳ್ಳಿ ಪ್ರಯಾಣಿಕರ ಲೆಕ್ಕಕ್ಕೇ ಸೇರಿ ಹೋಗುವ ಸಾಧ್ಯತೆ ಇದೆ. ಹೀಗಾಗುವುದರಿಂದ ಹಸಿರುಮಕ್ಕಿಯಲ್ಲಿ ಪ್ರಯಾಣಿಕರೇ ಇಲ್ಲ ಎಂದಾಗುವ ಸಾಧ್ಯತೆ ನಡುವೆಯೇ ದುರದೃಷ್ಟವಶಾತ್ ಅವಘಡಗಳೇನಾದರೂ ಸಂಭವಿಸಿದಲ್ಲಿ ಪ್ರಯಾಣಿಕರು ಯಾವುದೇ ಪರಿಹಾರವೂ ಸಿಗದ ಸಾಧ್ಯತೆ ಇದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಲಾಂಚ್ ಸಿಬ್ಬಂದಿಗಳನ್ನು ವಿಚಾರಿಸಿದರೆ ಟಿಕೆಟ್ ಕೊರತೆಯಿಂದಾಗಿ ಹೀಗೆ ಬದಲಿ ಟಿಕೆಟ್ ನೀಡುತ್ತಿರುವ ಕುರಿತು ಸಮಜಾಯಿಸಿ ನೀಡಿದ್ದಾರೆ. ಆದರೆ, ಹಾಗೆ ಮಾಡುವಲ್ಲಿ ಕನಿಷ್ಠ ಹಸರುಮಕ್ಕಿ-ಕೆ.ಬಿ.ಸರ್ಕಲ್ ಎನ್ನುವ ಮೊಹರಾದರೂ ಹಾಕಿ ನೀಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement