ಶಿವಮೊಗ್ಗ ಕ್ಷೇತ್ರದ ಕ್ರೈಸ್ತ ಧರ್ಮ ಅಧ್ಯಕ್ಷ ಫ್ರಾನ್ಸಿಸ್ ಸರಾವೋ
ಶಿವಮೊಗ್ಗ: ಕ್ರೈಸ್ತ ಕ್ಯಥೋಲಿಕ್ ಧರ್ಮ ಗುರು(ಪೋಪ್) ಫ್ರಾನ್ಸಿಸ್ ಅವರು ಕರ್ನಾಟಕ ಜೆಸ್ವಿಟ್ ಪ್ರಾಂತೀಯ ಮುಖ್ಯಸ್ಥರಾದ ಫ್ರಾನ್ಸಿಸ್ ಸರಾವೋರನ್ನು ಶಿವಮೊಗ್ಗ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಮಾ. 19 ವ್ಯಾಟಿಕನ್ ನಗರದಿಂದ ಘೋಷಣೆ ಮಾಡಲಾಯಿತು.
ಫ್ರಾನ್ಸಿಸ್ ಸರಾವೋ ಅವರು ಶಿಕ್ಷಣವನ್ನು ಪುಣೆಯ ಜ್ಞಾನದೀಪ ವಿದ್ಯಾಪೀಠದಲ್ಲಿ ತತ್ವಶಾಸ್ತ್ರ ಹಾಗೂ ದೈವಶಾಸ್ತ್ರಗಳಲ್ಲಿ ಪದವಿಯನ್ನು ಪಡೆದರು. ದೆಹಲಿಯ ವಿದ್ಯಾಜ್ಯೋತಿ ಕಾಲೇಜಿನಲ್ಲಿ ದೈವಶಾಸ್ತ್ರ ಮಾಸ್ಟರ್ ಪದವಿ ಪಡೆದಿದ್ದಾರೆ. 1992ರಲ್ಲಿ ಗುರುಗಳಾಗಿ ದೀಕ್ಷೆ ಪಡೆದು, ನಂತರ 99ರಲ್ಲಿ ಯೇಸು ಸಭೆಯ ಗುರುವಾಗಿ ಶಾಶ್ವತ ದೀಕ್ಷೆ ಪಡೆದರು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರಾಗಿ ಸೇವೆಸಲ್ಲಿಸಿರುವ ಇವರು ಕನ್ನಡ, ಆಂಗ್ಲ, ತುಳು, ಹಿಂದಿ ಮತ್ತು ಕೊಂಕಣಿ ಭಾಷಾ ಪರಿಣಿತರು.