ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಸ್ಕೃತ ಕಾವ್ಯವಾಚನ- ವ್ಯಾಖ್ಯಾನ ಸಪ್ತಾಹ

Rashmi Kasaragodu
Updated On : 21 Mar 2014, 12:02 pm

ಶಿವಮೊಗ್ಗ: ಸಂಕೇತಿ ಅಕಾಡೆಮಿಯು ಮಾ. 21ರಿಂದ 27ರವರೆಗೆ ಪ್ರತಿ ಸಂಜೆ 6ರಿಂದ 8ರವರೆಗೆ ಹೊಸಹಳ್ಳಿಯ ಗಮಕ ಭವನದಲ್ಲಿ ಸಂಸ್ಕೃತ ಕಾವ್ಯವಾಚನ- ವ್ಯಾಖ್ಯಾನ ಸಪ್ತಾಹ ಹಮ್ಮಿಕೊಂಡಿದೆ. 21ರಂದು ಸಂಜೆ ವೇ. ಮಾರ್ಕಂಡೇಯ ಅವಧಾನಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಎಂ.ಎಸ್. ಅನಂತನಾರಾಯಣ ಅವರು ದೂತಘಟೋತ್ಕಚಮ್ ಕೃತಿಯ ಕಾವ್ಯವಾಚನ ನಡೆಸಿಕೊಡಲಿದ್ದು, ರಾಜಾರಾಮಮೂರ್ತಿ ವ್ಯಾಖ್ಯಾನಿಸಲಿದ್ದಾರೆ.


ಇಂದು ಬಿಎಸ್‌ವೈ ಜತೆ ಸಂವಾದ
ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪತ್ರಕರ್ತರ ಸಂವಾದ ಆಯೋಜಿಸಿದೆ. ಬೆಳಗ್ಗೆ 9ಗಂಟೆಗೆ ಮಥುರಾ ಹೋಟೆಲ್ ಸಭಾಂಗಣದಲ್ಲಿ ಸಂವಾದ ನಡೆಯಲಿದ್ದು, ಸಂಘದ ಅಧ್ಯಕ್ಷ ಶೃಂಗೇಶ್ ಅಧ್ಯಕ್ಷತೆ ವಹಿ ಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ತಿಳಿಸಿದ್ದಾರೆ.
ರಂಗೋಲಿ ಸ್ಪರ್ಧೆ
ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಸಂಸ್ಕೃತಿ ಮಹಿಳಾ ವೇದಿಕೆಯು ಸ್ವಾಮಿ ವಿವೇಕಾನಂದ ಅಡ್ವೆಂಚರಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಜಂಟಿಯಾಗಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಗೋಪಾಲಗೌಡ ಬಡಾವಣೆಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯು ಮಾ. 23ರಂದು ಸಂಜೆ 4ರಿಂದ 6ರವರೆಗೆ ನಾಗಸುಬ್ರಹ್ಮಣ್ಯೇಶ್ವರ ದೇವಾಲಯದ ಸಮೀಪ ನಡೆಸಲಾಗುತ್ತದೆ. ಆಸಕ್ತರು ಮೊ. 9844520861 ಸಂಪರ್ಕಿಸುವಂತೆ ಮಂಜುನಾಥ್ ಕೋರಿದ್ದಾರೆ.
ಇಂದು ಉಚಿತ ಹನಿ ಕಾರ್ಯಕ್ರಮ
ಭದ್ರಾವತಿ:  ಪಾರಂಪರಿಕ ಸಿದ್ಧವೈದ್ಯ ದಿಂಡಿಗಲ್‌ನ ಕೆ.ಮುತ್ತುಕೃಷ್ಣನ್ ಮಾ.21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪಟ್ಟಣದ ತರೀಕೆರೆ ರಸ್ತೆಯ ಶಿವಸುಬ್ರಮಣ್ಯಸ್ವಾಮಿ ಆಶ್ರಮದಲ್ಲಿ ಉಚಿತ ಸಿದ್ಧ ಕಣ್ಣಿನ ಹನಿಯನ್ನು ಹಾಕುವ ಕಾರ್ಯಕ್ರಮ ನಡೆಸಿಕೊಡುವರು. ಕಣ್ಣಿನಲ್ಲಿ ನೀರು ಸುರಿಯುವುದು, ಕಣ್ಣುರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರಿಗೆ ಮತ್ತು ದೂರದೃಷ್ಟಿ ಹಾಗೂ ಸಮೀಪ ದೃಷ್ಟಿ ದೋಷ ಇರುವವರು ಉಪಯೋಗ ಪಡೆಯಬಹುದಾಗಿದೆ ಎಂದು ಆಶ್ರಮದ ವ್ಯವಸ್ಥಾಪಕರು ತಿಳಿಸಿದ್ದಾರೆ. ಮಾಹಿತಿಗಾಗಿ ಸಂಚಾರಿ ದೂ.ಸಂ. 9480283030, 9448255544 ಇಲ್ಲಿಗೆ ಸಂಪರ್ಕಿಸಲು ಕೋರಿದೆ.
ನೃತ್ಯ ಪ್ರದರ್ಶನಕ್ಕೆ ಚಾಲನೆ
ಜೋಗ್‌ಫಾಲ್ಸ್: ಸುಗ್ಗಿಯ ಕಾಲದಲ್ಲಿ ಕಣಿಬಿ ಸಮಾಜದವರು ಮನೆ ಮನೆಗೂ ಹೋಗಿ ಸುಗ್ಗಿ ಜಾನಪದ ನೃತ್ಯ ಮಾಡುವ ಮೂಲಕ ಶುಭಾಶಯ ತಿಳಿಸುವುದು ಸಂಸ್ಕೃತಿಯ ಪ್ರತೀಕ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್. ಸತೀಶ್ ತಿಳಿಸಿದರು. ಅವರು ನಿಗಮದ ಕಚೇರಿ ಸಂಕೀರ್ಣದ ಸಮೀಪ ನಡೆದ ಕಣಿಬಿ ಸಮಾಜದವರ ಜಾನಪದ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಲ್ಲಿನ ಹೆನ್ನಿ ಸಮೀಪ 40ಕ್ಕೂ ಹೆಚ್ಚು ಕುಟುಂಬ ವಾಸಿಸುತ್ತಿದ್ದು, ಅವರ ಆಚಾರ-ವಿಚಾರ ಉಡುಗೆ-ತೊಡುಗೆ ವಿಶಿಷ್ಟವಾಗಿದೆ. ಇವರ ನಡೆ, ನುಡಿ ಭಾಷೆ, ಸಂಸ್ಕೃತಿ ಒಂದು ಊರಿನ ಧ್ಯೋತಕವಾಗಿದೆ ಎಂದು ತಿಳಿಸಿದರು. ಸಂಚಾಲಕ ರಾಮಪ್ಪ ಹೆನ್ನಿ ಮಾತನಾಡಿ, ಸುಗ್ಗಿಕಾಲದಲ್ಲಿ ನಾವು ಹಾಡಿ, ನರ್ತಿಸುವುದು ನಮ್ಮ 4 ತಲೆಮಾರಿನಿಂದ ಬೆಳೆಸಿಕೊಂಡು ಬಂದ ಪದ್ಧತಿ ಎಂದರು. 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement