ಐದು ಮೇಳಗಳ ಕೂಡಾಟ
ಸಾಗರ: ತಾಲೂಕಿನ ಕರ್ಕಿಕೊಪ್ಪದಲ್ಲಿ ಶನಿವಾರ ರಾತ್ರಿ ಮಂದರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರು ಮಹಾಸತಿ ಪಾಂಚಾಲೆ ಹಾಗೂ ಜಾಂಬವತೀ ಕಲ್ಯಾಣ ಐದು ಮೇಳಗಳ ಕೂಡಾಟವನ್ನು ನಡೆಸಿಕೊಟ್ಟರು.
ಗುತ್ತಿಗೆದಾರ ಎಸ್.ಕೆ. ಚಂದ್ರು ಅವರು ಏರ್ಪಡಿಸಿದ್ದ ಹರಕೆ ಬಯಲಾಟದ ಹಿಮ್ಮೇಳನದಲ್ಲಿ ಕೆ.ಪಿ. ಹೆಗಡೆ, ನಗರ ಸುಬ್ರಹ್ಮಣ್ಯ, ಪರಮೇಶ್ವರ ನಾಯ್ಕ, ಅಣ್ಣಪ್ಪ ಶೆಟ್ಟಿ ಪಾಲ್ಗೊಂಡಿದ್ದರು. ಮುಮ್ಮೇಳನದಲ್ಲಿ ನರಾಡಿ ಭೋಜರಾಜ ಶೆಟ್ಟಿ, ಹೊಸಗಂಡಿ ರಾಜುಶೆಟ್ಟಿ, ಗುಂಡಿಬೈಲು ಸುಬ್ರಾಯ ಭಟ್ ಮೊದಲಾದವರು ಪಾಲ್ಗೊಂಡಿದ್ದರು.