ವಿದ್ಯಾರ್ಥಿಗಳು ರಕ್ತದಾನಕ್ಕೆ ಮುಂದಾಗಬೇಕು
ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ಜುಬಲಿ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜೆ.ಎನ್.ಎನ್.ಸಿ. ಎನ್ಎಸ್ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ರಕ್ತದ ಗುಂಪು ತಪಾಸಣೆ, ರಕ್ತ ತಪಾಸಣೆ ಹಾಗೂ ರಕ್ತದಾನದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ರಕ್ತದ ಗುಂಪಿನ ಅರಿವಿರಲಿ: ಈ ಸಂದರ್ಭದಲ್ಲಿ ಮಾತನಾಡಿದ ಜುಬಲಿ ಕ್ಲಬ್ನ ಅಧ್ಯಕ್ಷ ರೇವಣಸಿದ್ದಪ್ಪ, ಇಂದು ಪ್ರತಿನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.
ಆಗ ನಮ್ಮ ರಕ್ತದ ಗುಂಪು ನಮಗೆ ಗೊತ್ತಿಲ್ಲದೇ ಇದ್ದಾಗ ತುರ್ತಾಗಿ ಅನುಹುತಾ ನಡೆಯುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪು ಹಾಗೂ ತಪಾಸಣೆ ಮಾಡಿಸುವುದು ತುಂಬಾ ಸೂಕ್ತ ಎಂದು ಹೇಳಿದರು.
ಇಂದು ರಕ್ತದಾನದ ಅವಶ್ಯಕತೆ ತುಂಬಾ ಇದ್ದು, ವಿದ್ಯಾರ್ಥಿಗಳು ತಾವು ರಕ್ತದಾನ ಮಾಡುವುದರ ಜೊತೆಗೆ ಬೇರೆಯವರನ್ನು ಪ್ರೇರೇಪಿಸಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.
ಏ.25ರಂದು ಶಿಬಿರ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾಸಂಸ್ಥೆಯ ಅಧ್ಯಕ್ಷ ಎ.ಎಂ.ಸುರೇಶ್ ಮಾತನಾಡಿ, ಏಪ್ರಿಲ್ 25ರಂದು ಬೆಳಿಗ್ಗೆ 9.30ಕ್ಕೆ ರಕ್ತದಾನಿಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರವನ್ನು ಮಾನ್ಯ ಜಿಲ್ಲಾಧಿಕಾರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ವಿಜಯಕುಮಾರ್, ಜುಬಲಿ ಕ್ಲಬ್ ಕಾರ್ಯದರ್ಶಿ ಬಾಲಚಂದ್ರ, ಸಹಕಾರ್ಯದರ್ಶಿ ರಾಜಶೇಖರ್, ರಕ್ತದಾನಿಗಳಾದ ಧರಣೇಂದ್ರ ದಿನಕರ್, ಎನ್.ಎಸ್.ಎಸ್. ಘಟಕದ ಅಧಿಕಾರಿ ಮಹೇಶ್ವರಪ್ಪ ಹಾಗೂ ಪದಾಧಕಾರಿಗಳು ಉಪಸ್ಥಿತರಿದ್ದರು.