ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರ ರಸ್ತೆ ಚತುಷ್ಪತ ಎಂದು?

Lingaraj Badiger
Updated On : 24 Mar 2014, 12:02 pm

ಶಿವಮೊಗ್ಗದಲ್ಲಿರುವ ಸಾಗರ ರಸ್ತೆ ಚತುಷ್ಪತ ಆಗುವುದೆಂದು ಸರ್ಕಾರ ಕ್ರಮಕೈಗೊಂಡಿದೆ. ಆದರೆ, ಈ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಲೇ ಇಲ್ಲ. ಶಿವಮೊಗ್ಗದಿಂದ ಪೆಸೆಟಟ್ಕಾಲೇಜು ವರೆಗೆ ಅಗಲೀಕರಣಗೊಂಡು ಡಾಂಬರೀಕರಣವಾಗಿದೆ. ಆದರೆ, ಶಿವಮೊಗ್ಗ-ಭದ್ರಾವತಿ ನಡುವಿನ ಚತುಷ್ಪತದಂತೆ ಶಿವಮೊಗ್ಗ- ಆಯನೂರು ರಸ್ತೆ ಕೂಡ ಅಭಿವೃದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು. ಈ ಮೂಲಕ ಶಿವಮೊಗ್ಗ-ಸಾಗರ ಸಂಚಾರ ಸುಗುಮಗೊಳಿಸಬೇಕು.ಗಾಗಿ ತಕ್ಷಣವೇ ಸಂಬಂಧಪಟ್ಟವರು ಕ್ರಮಕೈಗೊಂಡರೆ ಒಳಿತು.
- ಪ್ರದೀಪ, ಬಿ.ಬಿ.ರಸ್ತೆ

ಗುಡ್ಡ ಕುಸಿಯುವ ಆತಂಕ
ಜಲಪಾತ ಪ್ರದೇಶದಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ಮಕ್ಕಳ ಉದ್ಯಾನವನದ ಸಮೀಪವೇ ಇರುವ ಸುಮಾರು 60 ಅಡಿ ಎತ್ತರವಿರುವ ಗುಡ್‌ಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಗುಡ್‌ಡದ ಮೇಲು ಭಾಗದಲ್ಲಿ ಹಾದು ಹೋಗಿರುವ ನೀರಿನ ಕೊಳವೆಯಿಂದ ನಿರಂತರವಾಗಿ ನೀರು ಜಿನುಗುತ್ತಿದ್ದು ಇದರಿಂದ ಮಣ್ಣು ಸಡಿಲವಾಗಿ ಬೃಹತ್ ಗುಡ್‌ಡ ಕುಸಿಯುವ ಭೀತಿ ಇದೆ. ಈ ಗುಡ್‌ಡದ ಮೇಲು ಭಾಗದಲ್ಲಿ ಹಲವಾರು ಬೃಹತ್ ಮರಗಳು ಇದ್ದು ಗುಡ್ಡ ಕುಸಿದ ತಕ್ಷಣ ಆ ಮರಗಳು ಧರೆಗೆ ಉರುಳುವ ಸಾಧ್ಯತೆ ಇದೆ. ಉದ್ಯಾನವನಲ್ಲಿರುವ ಆಟಿಕೆಗಳಲ್ಲಿ ಮಕ್ಕಳು ಆಟವಾಡುತ್ತಿದ್ದು ಮಕ್ಕಳಿಗೆ ಅಪಾಯವಾಗುವ ಮುನ್ನ ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ನಾಗರೀಕರು, ಜೋಗ್ ಫಾಲ್ಸ್

ಪದೇ ಪದೇ ವಿದ್ಯುತ್ ಕಡಿತ ಬೇಡ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್ಕ್‌ಡಿತ ಮಾಡಲಾಗುತ್ತಿದ್ದು ಇದರಿಂದ ಪರೀಕ್ಷೆ ಎದುರಿಸುತ್ತಿರುವ ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿದೆ. ವಿದ್ಯುತ್ವ್ಯ್‌ತ್ಯಯ ಮಾಡುವುದು ಅನಿವಾರ್ಯವಾದರೆ ಮಕ್ಕಳು ಓದುವ ಸಮಯ ಹೊರತುಪಡಿಸಿ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಲೋಚಿಸಿದರೆ ಉತ್ತಮ. ಪ್ರತಿ ದಿನ ಬೇಕಾಬಿಟ್ಟಿಯಾಗಿ ವಿದ್ಯುತ್ ತೆಗೆಯುವುದರಿಂದ ರೈತರು-ಜನಸಾಮಾನ್ಯರಿಗೂ ತೊಂದರೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಸಂಬಂಧಪಟ್ಟವರು ಕ್ರಮಕೈಗೊಂಡರೆ ಒಳಿತು.
-ಸಂಗಮೇಶ, ವಿನೋಬನಗರ

ಮರ ಕಡಿಯುವುದು ಸರಿಯಲ್ಲ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಅಗಲೀಕರಣದ ನೆಪದಲ್ಲಿ ಇಲ್ಲಿರುವ ಮರಗಳನ್ನು ಕಡಿಯಲು ಹೊರಟಿರುವ ಕ್ರಮ ಸರಿಯಲ್ಲ. ಈಗಾಗಲೇ ಶಿವಮೊಗ್ಗ ನಗರ ರಸ್ತೆ ಅಗಲೀಕರಣ ನೆಪದಲ್ಲಿ ಸಾವಿರಾರು ಮರಗಳನ್ನು ಕಳೆದುಕೊಂಡಿದೆ. ಆದ ಕಾರಣ ನಗರದ ತಾಪಮಾನ ಕೂಡ ಏರಿಕೆಯಾಗಿದೆ. ವಾಯುಮಾಲಿನ್ಯ ಹೆಚ್ಚಾಗಿದೆ. ಹಸಿರು ಪ್ರಮಾಣ ತಗ್ಗಿದೆ. ಈ ಕಾರಣದಿಂದ ಮರಗಳನ್ನು ಉಳಿಸಿಕೊಳ್ಳುವತ್ತ ಜಿಲ್ಲಾಡಳಿತ ಕ್ರಮವಹಿಸಿದೆ ಸೂಕ್ತ. ಇಷ್ಟೇ ಅಲ್ಲದೇ, ಮರಗಳನ್ನು ಕಡಿದೆಡೆ ಮತ್ತೆ ನೆಡುವ ಕೆಲಸವನ್ನು ನಗರಸಭೆ ಅಥವಾ ಜಿಲ್ಲಾಡಳಿತ ಮಾಡದೇ ಇರುವುದು ಬೇಸರದ ಸಂಗತಿ.
- ಮೊಹ್ಮದ್ ಗೌಸ್, ಬಿ.ಎಚ್.ರಸ್ತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement