ಕುಮಾರ್ ಬಂಗಾರಪ್ಪರಿಗೆ ಸ್ಥಾನಮಾನ ಕಲ್ಪಿಸಲು ಆಗ್ರಹ
ಶಿವಮೊಗ್ಗ: ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವ ನಿರ್ಧಾರದಿಂದ ಹಿಂದೆ ಸರಿದಿರುವುದುಕ್ಕೆ ಅವರ ಆತ್ಮೀಯರು, ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ. ಹಾಗೆಯೇ ಅವರಿಗೆ ತಕ್ಷಣವೇ ಕಾಂಗ್ರೆಸ್ ಸೂಕ್ತ ಸ್ಥಾನ ಮಾನದ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಇಲ್ಲಿನ ಶರಾವತಿ ನಗರದಲ್ಲಿ ಸಭೆ ನಡೆಸಿದ ಕುಮಾರ್ ಬಂಗಾರಪ್ಪ ಬೆಂಬಲಿಗರು, ಆತ್ಮೀಯರು ನಿರ್ಣಯ ಕೈಗೊಂಡು ಪಕ್ಷವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸಂಘಟನೆ ದೃಷ್ಟಿಯಿಂದ ಕುಮಾರ್ ಬಂಗಾರಪ್ಪ ಅವರ ಈ ನಿರ್ಧಾರ ಒಳಿತು. ಹೀಗಾಗಿ ಪಕ್ಷ ಕೂಡ ಕುಮಾರ್ ಬಂಗಾರಪ್ಪ ಅವರಿಗೆ ತಕ್ಷಣವೇ ಸೂಕ್ತ ಸ್ಥಾನಮಾನ ಘೋಷಣೆ ಮಾಡಬೇಕು ಎಂದು ಸೊರಬದ ಮುಖಂಡ ಶಿವಾನಂದಪ್ಪ ತಿಳಿಸಿದರು.
ಪಕ್ಷದಲ್ಲೇ ಇರಬೇಕೆಂಬ ನಮ್ಮೆಲ್ಲರ ಆಶಯದಂತೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಕುಮಾರ್ ಬಂಗಾರಪ್ಪ ಅವರಿಗೆ ಸೂಕ್ತ ಸ್ಥಾನ ಕಲ್ಪಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದು ಇಕ್ಕೇರಿ ರಮೇಶ್ ಹೇಳಿದರು.
ತಬಲಿ ಬಂಗಾರಪ್ಪ, ಜಿ.ಡಿ. ನಾರಾಯಣಪ್ಪ, ರಾಮಚಂದ್ರ, ಇಮ್ತಿಯಾಜ್ಖಾನ್ ಮತ್ತಿತರರು ಇದ್ದರು.