ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆರೆಹಳ್ಳಿ ಶಾಲೆಗೆ ಕಂಪ್ಯೂಟರ್ ವಿತರಣೆ

Lingaraj Badiger
Updated On : 26 Mar 2014, 11:56 am

ಸೊರಬ: ತಾಲೂಕಿನ ಕೆರೆಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಇನ್ಫೋಸಿಸ್ ಸಂಸ್ಥೆಯಿಂದ ಸರಬರಾಜಾದ ಕಂಪ್ಯೂಟರ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಸಾಪ ಜಡೆ ಘಟಕದ ಅಧ್ಯಕ್ಷ ಡಾ. ವಿಶ್ವನಾಥ ನಾಡಿಗೇರ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ವಿವೇಕ್ ಕಾಮತ್ ಅವರು ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ನಟರಾಜ್, ಮು.ಶಿ., ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಉದ್ಯಮಿ ವಿವೇಕ್ ಕಾಮತ್, ಎಸ್.ಡಿ.ಎಂ.ಸಿ.ಯ ಮಾಲತೇಶ್, ಅಶೋಕ್, ವನಜಾಕ್ಷಿ, ಜಡೆ ಗ್ರಾ.ಪಂ. ಸದಸ್ಯರಾದ ಅಶೋಕ್, ಶಾಲೆಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ನಟರಾಜ್ ಸ್ವಾಗತಿಸಿ, ಕರಿಬಸವನಗೌಡ ವಂದಿಸಿದರು. ಶೇಖರ್‌ನಾಯ್ಕ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement