ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತರಿಗೆ ಕೃಷಿಗಿಂತ ಖುಷಿ ಮತ್ತೆಲ್ಲೂ ಸಿಗದು: ಗಂಗಾಧರಪ್ಪ

Lingaraj Badiger
Updated On : 26 Mar 2014, 11:56 am

ಸೊರಬ: ತಲತಲಾಂತರದಿಂದಲೂ ಕೃಷಿಯಲ್ಲಿ ತೊಡಗಿರುವ ರೈತರಿಗೆ ಇಲ್ಲಿಗಿಂತ ಬೇರ್ಯಾವ ಕ್ಷೇತ್ರದಲ್ಲೂ ತೃಪ್ತಿ, ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹುಣವಳ್ಳಿ ಗಂಗಾಧರಪ್ಪ ತಿಳಿಸಿದರು.
ತಾಲೂಕಿನ ಉದ್ರಿ ಗ್ರಾಪಂ ವ್ಯಾಪ್ತಿಯ ಯಡಗೊಪ್ಪ ಗ್ರಾಮದ ಎನ್. ಪರಮೇಶ್ವರಪ್ಪ ಜಮೀನಿನಲ್ಲಿ ನಡೆದ ಕಣ ಹಬ್ಬ ಉತ್ಸವದಲ್ಲಿ ಗ್ರಾ.ಪಂ. ವ್ಯಾಪ್ತಿಯ ಹಿರಿಯ ರೈತರನ್ನು ಸನ್ಮಾನಿಸಿ ಮಾತನಾಡಿದರು.
ದೇಶದ ಬೆನ್ನೆಲುಬಾಗಿರುವ ರೈತರನ್ನು ರೈತರೇ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎನ್ನ ಬಹುದಾದರೂ ಆಡಳಿತ ವರ್ಗ ಇವರನ್ನೂ ಕಡೆಗಣಿಸತ್ತಿರುವುದು ಖೇದಕರ ಸಂಗತಿ ಎಂದರು.
ಉದ್ರಿ ಗ್ರಾಪಂ ಮಾಜಿ ಅಧ್ಯಕ್ಷ ಯಲಿಗಾರ್ ಹನುಮಂತಪ್ಪ ಮಾತನಾಡಿ, ತಾನು ಕಷ್ಟಪಟ್ಟು ದೇಶಕ್ಕೆ ಅನ್ನ ನೀಡುವ ರೈತರನ್ನು ಗೌರವಿಸುವುದರೊಂದಿಗೆ ಕೃಷಿಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು. ಕೃಷಿ ಇಲಾಖೆ ವತಿಯಿಂದ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಪಂ ಮತ್ತು ಸರ್ಕಾರ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ರೈತರಾದ ಉದ್ರಿ-ವಡ್ಡಿಗೇರಿಯ ಕಜ್ಜಿ ಹಿರಿಯಪ್ಪ, ವೀರಭದ್ರಪ್ಪ ಕೆಪ್ನೂರು, ಯಲ್ಲಪ್ಪ ಮಣ್ಣೂರು, ಹನುಮಂತಪ್ಪ ಕಬ್ಬೂರು, ಮಂಚಿ ಗ್ರಾಮದ ಬಸವಣಪ್ಪ ಡೊಂಕಣ್ಣರ್, ಉದ್ರಿ ಗ್ರಾಮದ ಧನಂಜಯಪ್ಪ, ಮಾಸ್ತಿ ಕೃಷ್ಣಪ್ಪ, ಗುಡ್ಡೇಕೊಪ್ಪದ ಮಹಾದೇವಪ್ಪ, ಯಲ್ಲಪ್ಪ ಬಿದರಗೇರಿ ಕಾನಕೇರಿ ಯಲಿಗಾರ್ ಹನುಮಂತಪ್ಪ, ಹಿತ್ತಲಕಡೆ ಕರಿಯಪ್ಪ, ಯಲವಾಟದ ತಿಮ್ಮಪ್ಪ ಮೂಡಿ, ಯಡಗೊಪ್ಪದ ಈರಗಲ್ಲ ಪರಸಪ್ಪ, ಹಳೆಗುಡ್ಡಿ ಬಸವಣ್ಯಪ್ಪ, ಚಿಕಾವಲಿ ಶಾಂತಗೌಡ, ಕುಮ್ಮೂರು ಕನ್ನಪ್ಪ, ಉಪ್ಪಳ್ಳಿಯ ನಿರ್ವಾಣಿ ಪರಸಪ್ಪ ಸೇರಿದಂತೆ ಬಿಳಾಗಿ, ತತ್ತೂರು, ಗ್ರಾಮದ ಹಿರಿಯ ರೈತರನ್ನು ಸನ್ಮಾನಿಸಲಾಯಿತು.
ಉದ್ರಿ ಗ್ರಾಪಂ ಅಧ್ಯಕ್ಷ ಭೀಮರಾಯಪ್ಪ, ಉಪಾಧ್ಯಕ್ಷ ಸುರೇಶ, ಮಾಜಿ ಅಧ್ಯಕ್ಷ ಯಲಿಗಾರ್ ಹನುಮಂತಪ್ಪ, ಪರಮೇಶ್ವರಪ್ಪ ಎನ್. ಯಡಗೊಪ್ಪ, ಮೋಹನ ಗುಡ್ಡೇಕೊಪ್ಪ, ಮಹೇಂದ್ರ, ಯೋಗೇಶ ವಕೀಲ, ಮೃತ್ಯುಂಜಯ ಹಾವೇರಿ, ಗಜಾನನರಾವ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement