ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೆಡಿಯು ಅಭ್ಯರ್ಥಿ: ಬಗೆಹರಿಯದ ಗೊಂದಲ

Lingaraj Badiger
Updated On : 27 Mar 2014, 12:25 pm

ಶಿವಮೊಗ್ಗ: ಜೆಡಿಯು ಅಧಿಕೃತ ಅಭ್ಯರ್ಥಿ ಯಾರು- ಈ ಗೊಂದಲ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರವೂ ಮುಂದುವರಿಯಿತು. ಮಂಗಳವಾರ ಮಾಜಿ ಶಾಸಕ ಬಿ.ಧರ್ಮಪ್ಪ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಬುಧವಾರ ತಾವೇ ಪಕ್ಷ ಘೋಷಿಸಿರುವ ಅಧಿಕೃತ ಅಭ್ಯರ್ಥಿ ಎಂದು ಹೇಳಿಕೊಂಡು ಶಿವರುದ್ರಯ್ಯ ಸ್ವಾಮಿ ಅವರೂ ಸಹ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
'ಬಿ' ಫಾರಂ ಮಾರಾಟ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಫಾರಂ ಮಾರಾಟವಾಗಿದೆ. ಸಂಚು ನಡೆಸಿ ಧರ್ಮಪ್ಪ ಅವರಿಗೆ ನಾಮಪತ್ರ ನೀಡಲಾಗಿದೆ. ನಾಮಪತ್ರ ಪರಿಶೀಲನೆ ದಿನದೊಳಗೆ 'ಸಿ' ಫಾರಂ ತರುತ್ತೇನೆ. ಇಲ್ಲದಿದ್ದರ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುತ್ತೇನೆ ಎಂದರು. ರವಿಕಿಶನ್, ವಕೀಲರಾದ ಮಂಜುಳಾದೇವಿ ಇದ್ದರು.
ಬುಧವಾರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಹಮದ್ ಫಯಾಜ್ ನಾಮಪತ್ರ ಸಲ್ಲಿಸಿದರು. ಕಳೆದ ಜನವರಿ ತಿಂಗಳಲ್ಲಿ ರಾಜಕೀಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಕರುನಾಡು ಪಕ್ಷದ ಅಭ್ಯರ್ಥಿಯಾಗಿ ಭದ್ರಾವತಿಯ ಶಶಿಕುಮಾರ್ ನಾಮಪತ್ರ ಸಲ್ಲಿಸಿದರು. ಹಲವು ಪಕ್ಷೇತರರು ನಾಮಪತ್ರ ಸಲ್ಲಿಸಿದರು. ಜನಸ್ಪಂದನ ವೇದಿಕೆಯ ಶ್ರೀಲತಾ ಶೆಟ್ಟಿ ಪಕ್ಷೇತರರಾಗಿ ಕಣಕ್ಕಿಳಿದರು. ಬೈಂದೂರಿನ ಸುರೇಶ್ ಪೂಜಾರಿ, ಸತೀಶ್ ಸಾಲಿಯಾನ್ ನಾಮಪತ್ರ ಸಲ್ಲಿಸಿದರು. ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ನಾಮಪತ್ರ ಸಲ್ಲಿಸಲು ಆಗಮಿಸುತ್ತಾರೆ ಎಂಬ ಸುದ್ದಿ ಇತ್ತು. ಪ್ರಮುಖ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಇಲ್ಲದಿದ್ದರೆ ತಾವೇ ನಿಲ್ಲುವುದಾಗಿಯೂ ಹೇಳಿದ್ದರು. ಆದರೆ ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವವರೆಗೂ ಅವರು ಬರಲೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement