ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಕ್ಷದ ಆದೇಶದಂತೆ ಸ್ಪರ್ಧೆ: ಮಂಜುನಾಥ್

Lingaraj Badiger
Updated On : 27 Mar 2014, 12:24 pm

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ.26
ಶಿವಮೊಗ್ಗ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಬಂಡಾರಿ ಅವರು ಶಿಕಾರಿಪುರ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು ನಾನು ಪಕ್ಷದಲ್ಲಿ ಯಾವದೇ ಅಧಿಕಾರ ಬಯಸದೇ ಕಾರ್ಯನಿರ್ವಹಿಸಿದ ವ್ಯಕ್ತಿ. ಈಗ ಚುನಾವಣೆಗೆ ಧುಮಿಕಿದ್ದು, ಜಿಲ್ಲೆಯಾದ್ಯಂತ ಜಿಪಂ.ತಾಪಂ.ಗ್ರಾಪಂ ಮತ್ತು ಪಪಂ ಸದಸ್ಯರನ್ನು ಸುಮಾರು 2 ಸಾವಿರ ಚುನಾಯಿತ ಪ್ರತಿನಿಧಿಗಳನ್ನು ನೇರವಾಗಿ ಸಂಪರ್ಕಿಸಿದಾಗ ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅವರೆಲ್ಲರ ಪರಿಶ್ರಮದಿಂದ ಪಕ್ಷ ಜಯಭೇರಿ ಬಾರಿಸಲಿದೆ ಎಂದರು.
ಯಾವ ಆಸೆಯೂ ಇಲ್ಲ: ಈ ಚುನಾವಣೆಯಲ್ಲಿ ಪಕ್ಷ ಆದೇಶಿಸಿದ ಹಿನ್ನೆಲೆಯಲ್ಲಿ ಚುನಾವಣೆಗೆ ನಿಂತಿದ್ದೇನೆ. ನಾನು ಯಾವದೇ ಹುದ್ದೆ ಅಥವಾ ಬೋರ್ಡ ನಿಗಮ ಮಂಡಳಿಯ ಅಧ್ಯಕ್ಷ ಪದವಿಯ ಆಸೆಯಿಂದ ಚುನಾವಣೆಗೆ ನಿಂತಿಲ್ಲ ಎಂದರು.
ಬಿಜೆಪಿ ಪಕ್ಷದವರು ಭಾರತ ಗೆಲ್ಲಿಸಿ ಎಂದು ಹೇಳುತ್ತಾ ಹೊರಟಿದ್ದಾರೆ. ಈ ವರೆಗೆ ಭಾರತ ಯಾವುದರಲ್ಲೂ ಹಿಂದೆ ಬಿದ್ದಿಲ್ಲ, ಹಾಗೆಯೇ ಎಲ್ಲ ಕ್ಷೇತ್ರದಲ್ಲಿ ಗೆಲ್ಲುತ್ತಿರುವಾಗ ಬಿಜೆಪಿ ಭಾರತ ಗೆಲ್ಲಿಸಿ ಎಂದು ಹೇಳುತ್ತಿರುವದು ಹಾಸ್ಯಾಸ್ಪದ ಎಂದ ಅವರು, ಭಾರತ ಗೆಲ್ಲಿಸಿ ಬಿಜೆಪಿ ಸೋಲಿಸಿ ಎಂದು ನಾವು ಕರೆಕೊಡುತ್ತಿದ್ದೇವೆ ಎಂದರು.
ನಾವು ಬಿಜೆಪಿ ಪಕ್ಷದ ಅಭ್ಯರ್ಥಿ ಬಗ್ಗೆ ಆಗಲಿ ಅಥವಾ ಯಾವ ಅಭ್ಯರ್ಥಿಯ ವಿರುದ್ಧವೂ ಮಾತನಾಡುವದಿಲ್ಲ. ಈ ಮೊದಲು ಬಿಜೆಪಿ ಬಿಟ್ಟವರು ಮತ್ತು ಬಿಜೆಪಿಲ್ಲಿ ಇದ್ದವರು ಎನು ಮಾತನಾಡಿದ್ದಾರೆ ಎಂಬುದನ್ನು ಪುಸ್ತಕಮಾಡಿ ಹಂಚುತ್ತೇವೆ ಆಗ ಮತದಾರರಿಗೆ ಅರ್ಥವಾಗುತ್ತದೆ ಎಂದರು.
ಭಂಡಾರಿ ಅವರೊಂದಿಗೆ ಜಿಲ್ಲಾ ಅಧ್ಯಕ್ಷ ಪ್ರಸನ್ನಕುಮಾರ್, ಕಲಗೋಡ ರತ್ನಾಕರ್, ಕೆಪಿಸಿಸಿ ಸದಸ್ಯ ನಗರದ ಮಹದೇವಪ್ಪ, ಮಾಜಿ ವಿಧಾನಪರಿಷತ್ ಸದಸ್ಯ ಶಾಂತವೀರಪ್ಪಗೌಡ, ಜಿಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ, ಜಿಪಂ ಮಾಜಿ ಸದಸ್ಯ ಜಾನಕಪ್ಪ, ಬ್ಲಾಕ್ ಅಧ್ಯಕ್ಷರಾದ ಗೋಣಿ ಮಾಲತೇಶ್, ಇತರ ಪ್ರಮುಖರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement