ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಕ್ಷೇತರರಾಗಿ ಹೆಬ್ರಿ ತಿಮ್ಮ ಸೋಮಯ್ಯ ಸ್ಪರ್ಧೆ

Lingaraj Badiger
Updated On : 27 Mar 2014, 12:25 pm

ಶಿವಮೊಗ್ಗ: ಯಾವುದೇ ರಾಜಕೀಯ ಪಕ್ಷಗಳು ಮಡಿವಾಳ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದನ್ನು ವಿರೋಧಿಸಿ ಪಕ್ಷೇತರರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಶಿಕ್ಷಣ ಮತ್ತು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್. ಸತೀಶ್ ಸಾಲಿಯಾನ್ ಹೇಳಿದ್ದಾರೆ.
ರಾಜ್ಯದಲ್ಲಿ 45 ಲಕ್ಷ ಜನರಿರುವ ಸಮುದಾಯಕ್ಕೆ ಯಾವ ರಾಜಕೀಯ ಪಕ್ಷಗಳೂ ಸಹ ಪ್ರಾತಿನಿಧ್ಯ ನೀಡುತ್ತಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ನಮ್ಮ ಸಮುದಾಯ ಉಪೇಕ್ಷೆಗೆ ಒಳಗಾಗಿಗಿದೆ. ದೇಶದ 17 ರಾಜ್ಯಗಳಲ್ಲಿ ಇರುವ ಮೀಸಲಾತಿ ಸೌಲಭ್ಯ ರಾಜ್ಯದ ಮಡಿವಾಳ ಸಮುದಾಯಕ್ಕೆ ಸಿಕ್ಕಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಾತ್ಮಕವಾಗಿ ಧಕ್ಕಬೇಕಿದ್ದ ನ್ಯಾಯಬದ್ಧ ಪಾಲನ್ನು ಬಲಾಢ್ಯರೇ ಕಬಳಿಸಿಕೊಂಡಿದ್ದಾರೆ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಡಿವಾಳರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲು ಈ ಸ್ಪರ್ಧೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಎಂ. ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement