ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮತ ಹಣಕ್ಕೆ ಮಾರದಿರಿ'

Lingaraj Badiger
Updated On : 27 Mar 2014, 12:24 pm

ಸೊರಬ: ಚುನಾವಣೆಗಳಲ್ಲಿ ನಮ್ಮ ಅತ್ಯಮೂಲ್ಯ ಮತವನ್ನು ಕಾಸಿಗೆ ಮಾರಿಕೊಂಡು ನಮ್ಮ ನೈತಿಕತೆ ಕಳೆದುಕೊಳ್ಳವುದು ನಮಗೆ ನಾವೇ ಮಾಡಿಕೊಳ್ಳುವ ಮೋಸವಾಗಿದೆ ಎಂದು ಅಸೋಸಿಯೆಷನ್ ಫಾರ್  ಡೆಮೋಕ್ರೆಟಿಕ್ ರಿಫಾರ್ಮ್ ತಂಡದ ರವಿ ಬೆಂಗಳೂರು ತಿಳಿಸಿದರು.
ಅವರು ಕರ್ನಾಟಕ ಎಲೆಕ್ಷನ್ ವಾಚ್ - 2014 ಎಂಬ ಶೀರ್ಷಿಕೆಯಡಿಯಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ   ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಹಣದ ಹೊಳೆ: ಇತ್ತೀಚಿಗೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಸರ್ಕಾರ ಚುನಾವಣೆ ನಿರ್ವಹಣೆಗೆಂದು ರಾಜಕೀಯ ಪಕ್ಷಗಳಿಗೆ ಯಾವುದೇ ಹಣಕಾಸು ಸೌಲಭ್ಯ ಒದಗಿಸುವುದಿಲ್ಲ. ಆದರೂ ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ರು. ಖರ್ಚು ಮಾಡುತ್ತಿವೆ ಎಂದರು.
--
ಹತಾಶೆಯಿಂದ ಓಟು ಕೇಳವ ಬಿಎಸ್‌ವೈ
ಶಿವಮೊಗ್ಗ: ಮೋದಿಗಾಗಿ ಓಟು ಕೊಡಿ, ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ ಎಂದು ಯಡಿಯೂರಪ್ಪನವರು ಹತಾಶ ಭಾವನೆಯಿಂದ ಓಟು ಕೇಳುತ್ತಿದ್ದಾರೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಹನಸವಾಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರ ನಡೆಸಿದ ಅವರು ಸಾರ್ವಜನಿಕರನ್ನುದ್ದೇಶಿ ಮಾತನಾಡಿದರು.
ಗೀತಾ ಶಿವರಾಜ್‌ಕುಮಾರ್, 45 ವರ್ಷಕಾಲ ನಮ್ಮ ತಂದೆಯವರನ್ನು ಬೆಳೆಸಿ ರಾಷ್ಟ್ರೀಯ ಮಟ್ಟದ ನಾಯಕರನ್ನಾಗಿ ಮಾಡಿದ್ದೀರಾ. ಈಗ ನಾನು ಮತ ಕೇಳಲು ಬಂದಿದ್ದೇನೆ, ನಿಮ್ಮ ಕಷ್ಟ ಸುಖದ ಜೊತೆಗಿರುತ್ತೇನೆ, ಒಮ್ಮೆ ಜವಾಬ್ದಾರಿ ಕೊಡಿ ಎಂದರು. ಶಾಸಕಿ ಶಾರದಾ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement