ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರತಿಭಟನೆ

Mainashree
Updated On : 29 Mar 2014, 11:17 am

ಹೊಸನಗರ: ಕಳೆದ 4 ವರ್ಷಗಳಿಂದ ಪುರಪ್ಪೆಮನೆ ಗ್ರಾಮ ಪಂಚಾಯಿತಿ ಆಡಳಿತ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದಲ್ಲದೆ ಸ್ವಜನಪಕ್ಷಪಾತ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಅದರ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಪುರಪ್ಪೆಮನೆ ನಾಗರಿಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಶುಕ್ರವಾರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿತು.
ಪಂಚಾಯಿತಿಯಿಂದ ನಿರ್ಮಾಣಗೊಂಡ 1 ಬಾವಿಗೆ ಮೂರು ಬಾರಿ ಬಿಲ್ ಮಾಡಿರುವುದೂ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಜನ ಸಾಮಾನ್ಯರ ಪರವಾದ ಯಾವುದೇ ಕಾಮಗಾರಿಗಳನ್ನು ಕೈಗೊಳದಿರುವುದು ಮತ್ತು ಇದುವರೆಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಲ್ಲಿ ಅಸಮರ್ಥರಾಗಿರುವುದು ಖಂಡನೀಯ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಸರಕಾರದ ಉನ್ನತ ತನಿಖಾಧಿಕಾರಿಗಳು ಇಲ್ಲಿನ ಭ್ರಷ್ಟಾಚಾರದ ವಿರುದ್ಧ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಸಕಾಲದಲ್ಲಿ ತನಿಖೆ ಕೈಗೊಂಡು ಸ್ಥಳೀಯ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೆ. ಗುರುಪ್ರಸಾದ, ಡಿ. ಗುರುಮೂರ್ತಿ, ಎ.ಟಿ. ಅರುಣ್, ಎಸ್. ನಾರಾಯಣಸ್ವಾಮಿ, ಎ.ಎನ್. ಪ್ರಕಾಶ್, ಎಚ್.ಟಿ. ಕೃಷ್ಣಮೂರ್ತಿ, ಚಲನಚಿತ್ರ ನಟ ಏಸುಪ್ರಕಾಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement