ಮಹಿಳೆ ಮೇಲೆ ಅತ್ಯಾಚಾರ ಯತ್ನ
ಶಿವಮೊಗ್ಗ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿರುವ ಪ್ರಸಂಗ ಹೊಳೆಹೊನ್ನೂರು ಸಮೀಪದ ಅರಹತೊಳಲು ಬಳಿ ನಡೆದಿದೆ.
ಗುರುವಾರ ರಾತ್ರಿ 9 ಗಂಟೆ ವೇಳೆಗೆ ತಟ್ಟೆಹಳ್ಳಿಗೆ ಹೋಗುವ ಉದ್ದೇಶದಿಂದ ಕೈಮರಕ್ಕೆ ಮಹಿಳೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಡ್ರಾಪ್ ನೀಡುವುದಾಗಿ ಹೇಳಿ ಆಕೆಯನ್ನು ಕರೆದುಕೊಂಡು ಹೋಗಿ ತಟ್ಟೆಹಳ್ಳಿ ತೋಟದ ಬಳಿ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದಾರೆ. ಆಕೆ ಒಪ್ಪಿಲ್ಲ. ನಂತರ ಆಕೆಯನ್ನು ಕೆರೆಯಲ್ಲಿ ಎಸೆಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ತಾನು ವಿಧವೆಯಾಗಿದ್ದು, ನನ್ನ ಮಕ್ಕಳನ್ನು ನೋಡಿಕೊಳ್ಳಬೇಕು ಸಾಯಿಸಬೇಡಿ ಎಂದು ಆಕೆ ಗೋಗರೆದಿದ್ದು, ಆ ಇಬ್ಬರು ಕಾಮುಕರನ್ನು ವಿಷಯ ಯಾರಿಗೂ ಹೇಳದಂತೆ ಒತ್ತಾಯಿಸಿ ಮನೆಗೆ ಕಳುಹಿಸಿದ್ದಾರೆ.
ಊರಿಗೆ ಬಂದ ಮಹಿಳೆಯ ನಡೆದ ವಿಷಯವನ್ನು ಗ್ರಾಮಸ್ಥರಲ್ಲಿ ತಿಳಿಸಿದ್ದಾರೆ. ರಾತ್ರಿ 1.30ರ ಸುಮಾರಿಗೆ ಊರಿಗೆ ಬಂದ ಆ ಇಬ್ಬರನ್ನು ದೇವಸ್ಥಾನದ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು ಗೂಸಾ ನೀಡಿದ್ದಾರೆ. ವಿಷಯ ತಿಳಿದ ಹೊಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.