ಬಿಎಸ್ವೈ ಸಾಧನೆಯೇ ಚುನಾವಣಾ ಮಂತ್ರ
ಹೊಸನಗರ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಹಲವಾರು ಜನಪರ ರೈತ ಪರ ಕಾರ್ಯಕ್ರಮಗಳು ಮತ್ತು ಜಿಲ್ಲೆಯಲ್ಲಿ ಹಿಂದೆಂದು ಕಾಣದಂತಹ ಅಭಿವೃದ್ಧಿ ಯೋಜನೆಗಳು ಈ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸಾಧನೆಗಳನ್ನೇ ಚುನಾವಣಾ ಮಂತ್ರ ಮಾಡಿಕೊಂಡು ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಮುಖಂಡ ಬಿ.ಆರ್. ಜಯಂತ್ ಮಾತನಾಡಿ, ಎದುರಾಳಿಗಳ ನಡೆ ಅರಿತು ಮುಂದಿನ ಗೆಲವಿನ ತಂತ್ರಗಾರಿಕೆ ರೂಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಕೆ.ವಿ. ಕೃಷ್ಣಮೂರ್ತಿ, ಎನ್.ಆರ್. ದೇವಾನಂದ್, ಸಣ್ಣಕ್ಕಿ ಮಂಜು ಮತ್ತಿರಿದ್ದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ನಿಷ್ಕ್ರಿಯ
ಹೊಸನಗರ: ರಾಜ್ಯದಲ್ಲಿ ಅಧಿಕಾರ ಹಿಡಿದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಷ್ಕ್ರಿಯವಾಗಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ನಡೆಯದೆ ಅಭಿವೃದ್ಧಿ ಕುಂದುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಲ್ಲೆಯ ಅಭಿವೃದ್ಧಿ ಸಾಧಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕಾಗೋಡು ಕೇವಲ ಶಾಸಕ: ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪನವರು ವಿಧಾನಸಭೆಗೆ ಮಾತ್ರ ಸ್ಪೀಕರ್. ಸಾಗರ ಹೊಸನಗರದಲ್ಲಿ ಅವರೊಬ್ಬ ಕೇವಲ ಶಾಸಕರು. ಇಲ್ಲೂ ಸ್ಪೀಕರ್ ತರ ನಡೆದುಕೊಂಡರೆ ನೋಡುಗರು ನಗುತ್ತಾರೆ ಅಷ್ಟೆ ಎಂದು ಟೀಕೆ ಮಾಡಿದ ಬೇಳೂರು, ವಯೋವೃದ್ಧ ಕಾಗೋಡು ಏನೇನೂ ಮಾತನಾಡಿದ್ದಾರೆ ಅದಕ್ಕಲ್ಲ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಬಿ.ಆರ್. ಜಯಂತ್, ಕೆ.ವಿ. ಕೃಷ್ಣಮೂರ್ತಿ, ಎನ್.ಆರ್. ದೇವಾನಂದ್, ನಾಗರತ್ನ ದೇವರಾಜ್, ಬಿ. ಯುವರಾಜ್, ಸುಧಾಕರ್, ಬಂಡಿ ದಿನೇಶ್, ಎ.ವಿ. ಮಲ್ಲಿಕಾರ್ಜುನ್, ಮಾಧ್ಯಮ ಪ್ರಮುಖ ತೀರ್ಥೇಶ್ ಮತ್ತಿತರಿದ್ದರು.