ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಮಿಷ ಒಡ್ಡಿದರೆ ಕ್ರಮ: ಎಚ್ಚರಿಕೆ

Rashmi Kasaragodu
Updated On : 31 Mar 2014, 1:57 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ.30
ದುರ್ಬಲ ವರ್ಗ ಮತ್ತು ಹಿಂದುಳಿದ ಜನಾಂಗದವರಿಗೆ ವಿವಿಧ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಆಮಿಷ ಒಡ್ಡಿ ಒತ್ತಡ ಹೇರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮತ್ತು ಸಂವಿಧಾನಬಾಹಿರ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಗೋಪಾಲ ತಿಳಿಸಿದರು.
ಇಲ್ಲಿನ ಪಪಂ ಸಭಾ ಭವನದಲ್ಲಿ ದುರ್ಬಲ ವರ್ಗದವರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಮಾಡಲಾಗುತ್ತಿದೆ ಎಂದ ಅವರು, ದುರ್ಬಲ ವರ್ಗದ ಜನಾಂಗ ಹೆಚ್ಚಾಗಿ ಇರುವಂಥ ಮತಗಟ್ಟೆ ಗುರುತಿಸಿ ಇಂತಹ ಮಾಹಿತಿ ಕೊಡಲಾಗುವುದು ಎಂದ ಅವರು, ಯಾವುದೇ ರಾಜಕೀಯ ಪಕ್ಷಗಳು ಈ ಕೃತ್ಯ ನಡೆಸಿದರೆ ಅಂತಹ ರಾಜಕೀಯ ಪಕ್ಷಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ದೂರು ಸಲ್ಲಿಸಿ: ಯಾವುದೇ ರಾಜಕೀಯ ಪಕ್ಷಗಳು ಆಮಿಷ ಒಡ್ಡಿದರೆ ತಕ್ಷಣ ಚುನಾವಣಾ ಇಲಾಖೆಗೆ ದೂರು ಸಲ್ಲಿಸಬಹುದು ಎಂದರು.
ಚುನಾವಣೆ ಕಾರ್ಯ ಅಚ್ಚುಕಟ್ಟಾಗಿ ನಡೆಯಲು ತಾಲೂಕಿನಲ್ಲಿ 5 ಚೆಕ್‌ಪೋಸ್ಟ್, 5ಪ್ಲೈಇಂಗ್ ಸ್ಕ್ವಾಡ್, 2 ಸ್ವ್ಯಾಟಿಕ್ ಸರ್ವಲೆನ್ ಸ್ಕ್ವಾಡ್, ವಿಡಿಯೋ ಕಣ್ಗಾವಲು ಕಾರ್ಯ ನಡೆಯುತ್ತಿದೆ ಎಂದ ಅವರು, ಅಕ್ರಮ ನಡೆದಲ್ಲಿ  ಮೊ. 9480876001 ಕರೆ ಮಾಡುವಂತೆ ಕೋರಿದರು.
ನ್ಯಾಯ ಸಮ್ಮತ ಚುನಾವಣೆ: ಡಿಎಎಸ್ಪಿ ನಾಗರಾಜ್ ಮಾತನಾಡಿ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ದುರ್ಬಲ ವರ್ಗ ಹಾಗೂ ಇತರ ಎಲ್ಲ ಮತದಾರರ ಸಹಕಾರವಿದ್ದಾಗ ಚುನಾವಣೆ ಶಾಂತ ರೀತಿಯಿಂದ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಾಧ್ಯ ಎಂದರು.
ಉಡಗಣಿ ಪ್ಲೈಇಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥ ಶಿರಾಳಕೊಪ್ಪ ಪಪಂ ಮುಖ್ಯಧಿಕಾರಿ ಪ್ರಾರಂಭದಲ್ಲಿ ಸ್ವಾಗತಿಸಿದರು. ಶಿರಾಳಕೊಪ್ಪ ಎಸ್‌ಐ ಗುರುಪ್ರಸಾದ್ ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮದ್ಯ ವಶ: ತಾಲೂಕಿನ ಹಲವಾರು ಕಡೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸಾರಾಯಿ ಮತ್ತು ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಗೋಪಾಲ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement