ಭಂಡಾರಿ ಪರ ಎನ್ನೆಸ್‌ಯುಐ ಸೈಕಲ್ ಜಾಥಾ
ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ. ಮಂಜುನಾಥ ಭಂಡಾರಿ ಅವರ ಪರ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ಭಾನುವಾರ ಸೈಕಲ್ ಜಾಥಾ ನಡೆಸಿ ಮತಯಾಚಿಸಿದರು.
ನಗರದ ಕೋಟೆ ಶ್ರೀಸೀತಾರಾಮಾಂಜನೇಯ ದೇವಾಲಯದ ಬಳಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಎನ್‌ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಷಣ್ ಹಾಗೂ ರಾಜ್ಯಾಧ್ಯಕ್ಷ ಸಿದ್ವೀರ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಸಂಸದರಾದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದ ಅವರು, ಅಭ್ಯರ್ಥಿಪರ ಮತ ಯಾಚನೆ ಮಾಡಲು ಕಾರ್ಯಕರ್ತರು ಹಿಂಜರಿಯುವ ಅವಶ್ಯಕತೆ ಇಲ್ಲ ಎಂದರು.
ದೇವಾಲಯದಿಂದ ಹೊರಟ ಜಾಥಾ ಎಸ್.ಪಿ.ಎಂ. ರಸ್ತೆ, ಗಾಂಧಿಬಜಾರ್, ಬಿ.ಎಚ್. ರಸ್ತೆ, ನೆಹರೂ ರಸ್ತೆ ಮೂಲಕ ಗೋಪಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಯಾಯ್ತು. ಜಾಥಾದಲ್ಲಿ 300ಕ್ಕೂ ಹೆಚ್ಚು ಎನ್‌ಎಸ್‌ಯುಐ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೇಳಿಕೊಂಡರು.
ಎನ್.ಎಸ್.ಯು.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್, ರಾಜ್ಯ ಕಾರ್ಯದರ್ಶಿ ಶಶಿ, ರಾಮನಗರ ಜಿಲ್ಲಾಧ್ಯಕ್ಷ ಅನಿಲ್, ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ವಿಶ್ವನಾಥ್ (ಕಾಶಿ), ಪ್ರಮುಖರಾದ ಕೆ. ದೇವೇಂದ್ರಪ್ಪ, ಸಂತೋಷ್, ಶ್ರೀಜಿತ್, ಗಿರೀಶ್, ಮನೋಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮತ ಯಾಚನೆ: ಮಂಜುನಾಥ ಭಂಡಾರಿ ಅವರು ಭಾನುವಾರ ಬೆಳಗ್ಗೆ ಎಪಿಎಂಸಿ ತರಕಾರಿ ಮಂಡಿ ಬಳಿ ಮತ ಯಾಚಿಸಿದರು. ಮುಖಂಡರಾದ ಎನ್. ರಮೇಶ್ ಹಲವರು ಇದ್ದರು.