ಸಹಾಯಕ್ಕೆ ಮನವಿ
ಹೊಸನಗರ: ತಾಲೂಕಿನ ಬೈಸೆ ಗ್ರಾಮದ ನರಸಿಂಹ ಆಚಾರ ಎಂಬುವವರ ಮಗ ಶ್ರೀಪಾದ್ (29) ಭಾನುವಾರ ಸಂಜೆ ಬೆಂಗಳೂರಿನ ನಾರಾಯಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾದರು.
ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶ್ರೀಪಾದರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತನ ತಂದೆ ನರಸಿಂಹ ಆಚಾರ್ 2 ವರ್ಷದ ಹಿಂದೆ ಪಾರ್ಶುವಾಯುಗೆ ಒಳಗಾಗಿ ಅನಾರೋಗ್ಯ ಪೀಡಿತರಾಗಿದ್ದಾರೆ. ತಾಯಿ ಶಾಂತಮ್ಮ ಅಂಗನವಾಡಿ ಅಡುಗೆ ಸಹಾಯಕಿ ಕೆಲಸ ಮಾಡುತ್ತಿದ್ದು, ಅದರಿಂದ ಸಂಸಾರ ತೂಗಿಸಬೇಕಾಗಿದೆ. ಸೋಮವಾರ ಮೃತದೇಹದ ಅಂತ್ಯಕ್ರಿಯೆ ನಡೆಯಲಿದೆ.
ಮನವಿ: ಶ್ರೀಪಾದನ ಚಿಕಿತ್ಸೆಗಾಗಿ ಆತನ ಬಡ ತಂದೆ- ತಾಯಿ ಇಲ್ಲಿಯವರೆಗಿನ 4 ಲಕ್ಷ ಮಾಡಿದ್ದಾರೆ. ಸ್ನೇಹಿತರು ಮತ್ತು ದಾನಿಗಳ ಸಹಕಾರದಿಂದ ಈ ವೆಚ್ಚ ಭರಿಸಲಾಗಿದೆ. ಈಗ ಮಗನನ್ನೂ ಕಳೆದುಕೊಂಡ ತಂದೆ, ತಾಯಿ ಬದುಕು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು 09481211176ಕ್ಕೆ ಸಂಪರ್ಕಿಸಿ.