ಅರ್ಹತಾ ಪರೀಕ್ಷೆಗೆ ಮಾರ್ಗದರ್ಶನ
ಶಿವಮೊಗ್ಗ: ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಕೆಎಆರ್- ಟಿಇಟಿ) ಉಚಿತ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರಿಯದರ್ಶಿನಿ ಡಿಎಡ್ ಕಾಲೇಜು ಆಯೋಜಿಸಿದ್ದು, ಮೇ 4ರ ಭಾನುವಾರ ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವುದು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್ ಅವರು ಈ ವಿಷಯ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ನೇಮಕಾತಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, 1ರಿಂದ 8ನೇ ತರಗತಿವರೆಗಿನ ಶಾಲೆಗಳಲ್ಲಿ ಬೋಧಿಸಲು ಶಿಕ್ಷಕರಾಗಬಯಸುವ ಅರ್ಹ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಬೇಕು.
ಜೂ. 15ರಂದು ಪರೀಕ್ಷೆ ನಡೆಯಲಿದ್ದು, ಮೇ 7ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಉತ್ತಮ ಸಿದ್ಧತೆಗಾಗಿ ಯೋಜನಾಬದ್ಧ ತಯಾರಿ ಅಗತ್ಯವಿದೆ. ಇದಕ್ಕಾಗಿ ಮಾರ್ಗದರ್ಶನ ನೀಡಲು ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎನ್. ರಮೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಪನ್ಮೂಲ ವ್ಯಕ್ತಿಗಳಾದ ವೈ.ಬಿ. ವೆಂಕಟೇಶ್, ಆನಂದ್, ದಾವಣಗೆರೆಯ ವಾಮದೇವಪ್ಪ ಮಾರ್ಗದರ್ಶನ ಮಾಡುವರು. ಹೆಚ್ಚಿನ ಮಾಹಿತಿಗೆ ಮೊ. 9448123344, 9019328009, ದೂ. 08182- 248835 ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಿಯದರ್ಶಿನಿ ಕಾಲೇಜಿನ ಸಲಹೆಗಾರರಾದ ಪ್ರಸನ್ನಕುಮಾರ್, ಹಬೀಬುಲ್ಲಾ ಸೇರಿದಂತೆ ಹಲವರು ಇದ್ದರು.