ನವ ಚಂಡಿಕಾ ಹೋಮ
ಶಿವಮೊಗ್ಗ: ಇಲ್ಲಿನ ಬಿಬಿ ರಸ್ತೆಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶಂಕರ ಜಯಂತಿ ಸಭಾವು ಜಗದ್ಗುರು ಶಂಕರಾಚಾರ್ಯರ 109ನೇ ಜಯಂತ್ಯುತ್ಸವ ನಡೆಸುತ್ತಿದ್ದು, ಮೇ 2ರ ಶುಕ್ರವಾರ ನವ ಚಂಡಿಕಾ ಪಾರಾಯಣ ಮತ್ತು ನವ ಚಂಡಿಕಾ ಹೋಮ ಆಯೋಜಿಸಿದೆ. ಏಪ್ರಿಲ್ 30ರಿಂದಲೇ ವಿವಿಧ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿ ದಿನ ಬೆಳಗ್ಗೆ ಪಂಚಾಮೃತ, ಏಕಾದಶ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾರ್ಚನೆ ನಡೆಯುತ್ತಿದೆ. ಮೇ 3ರಂದು ಬೆಳಗ್ಗೆ 9.30ರಿಂದ ಶಿವಾನಂದ ಲಹರಿ ಮತ್ತು ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ.
ಮೇ 4ರಂದು ಬೆಳಗ್ಗೆ ಶಂಕರ ವಿಜಯ ಪುರಾಣ ಮಂಗಳ, ಭಜನೆ ನಡೆಯಲಿದ್ದು, ಸಂಜೆ 6.30ರಿಂದ ರಾಜಬೀದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಂಕರ ಜಯಂತಿ ಸಭಾದ ಅಧ್ಯಕ್ಷ ಬಿ.ಎನ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎ. ಅನಂತಸ್ವಾಮಿ ತಿಳಿಸಿದ್ದಾರೆ.
ಪಾರಾಯಣ ಮಹಾಯಜ್ಞ
ಶಿವಮೊಗ್ಗ: ಭಾರತೀಯ ವಿಚಾರ ವೇದಿಕೆಯು ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸುಂದರಕಾಂಡ ಪಾರಾಯಣ ಮಹಾಯಜ್ಞ ಆರಂಭಿಸಿದೆ. ಮೇ 1ರಿಂದ ಮೇ 27ರವರೆಗೆ ಸಾಮೂಹಿಕ ಸಂಕ್ಷಿಪ್ತ ಸುಂದರಕಾಂಡ ಪಾರಾಯಣ ಪ್ರತಿದಿನ ಸಂಜೆ 6.30ರಿಂದ ನಡೆಸಲಾಗುತ್ತದೆ. ಮೇ 31ರಂದು ಸುಂದರಕಾಂಡ ಪಾರಾಯಣ ಹೋಮವನ್ನು ಪ್ರಾರಂಭಿಸಿ ಜೂ. 1ರಂದು ಪೂರ್ಣಾಹುತಿ ನೆರವೇರಿಸಲಾಗುತ್ತದೆ ಎಂದು ವೇದಿಕೆ ತಿಳಿಸಿದೆ.
ಪೂರ್ವಭಾವಿ ಉಚಿತ ಕಾರ್ಯಾಗಾರ
ಶಿವಮೊಗ್ಗ: ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್ ಟಿಇಟಿ) ಪೂರ್ವಭಾವಿ ತರಬೇತಿ ಉಚಿತ ಕಾರ್ಯಾಗಾರವನ್ನು ಜ್ಞಾನದೀವಿಗೆ ಅಕಾಡೆಮಿಯು ಆರಂಭಿಸಿದೆ. ತರಬೇತಿಯು ನಗರದ ಉಷಾ ನರ್ಸಿಂಗ್ ಹೋಂ ಸಮೀಪದ ಎಸ್ಬಿಎಂ ಬಿಲ್ಡಿಂಗ್ ನ ವಿನಾಯಕ ಕಾಂಪ್ಲೆಕ್ಸ್ನಲ್ಲಿ ತರಬೇತಿ ನಡೆಯಲಿದೆ. ವಿವರಕ್ಕೆ ದೂ. 08182- 405199, ಮೊ. 9449685131, 9448145811.
ಬೇಸಿಗೆ ತರಬೇತಿ ಶಿಬಿರ
ಶಿವಮೊಗ್ಗ: ಯುನೈಟೆಡ್ ಕರಾಟೆ ಅಕಾಡೆಮಿಯು 21 ದಿನಗಳ ಬೇಸಿಗೆ ತರಬೇತಿ ಶಿಬಿರ ಆಯೋಜಿಸಿದೆ. ವಿಶೇಷವಾಗಿ ಆತ್ಮರಕ್ಷಣೆಯ ಬಗ್ಗೆ ತರಬೇತಿ ನೀಡಲಾಗುವುದು. ಎಂಪಿಎಂಸಿ ಯಾರ್ಡ್ ಪಶು ಆಸ್ಪತ್ರೆ ಆವರಣದಲ್ಲಿ ಶಿಬಿರ ನಡೆಯುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮುರಳಿ ಎಚ್. ಸಣ್ಣಕ್ಕಿ (ಮೊ. 9845151301) ಸಂಪರ್ಕಿಸಿ.