ಬಸವೇಶ್ವರ ಚರಿತ್ರೆ ಯಕ್ಷಗಾನ ಇಂದು
ಶಿವಮೊಗ್ಗ: ನಾಟ್ಯಶ್ರೀ ಕಲಾತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಗಮದಡೆಗೆ ಯಕ್ಷನಡಿಗೆ ಕಾರ್ಯಕ್ರಮಮದಡಿ ಮೇ 2ರಂದು ಸಂಜೆ 6.30ಕ್ಕೆ ವೆಂಕಟೇಶ ನಗರ ಬಸವಕೇಂದ್ರದಲ್ಲಿ ಜಗಜ್ಯೋತಿ ಬಸವೇಶ್ವರ ಚರಿತ್ರೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಟ್ಯಶ್ರೀ ಕಲಾತಂಡದ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ ಅವರು ಈ ವಿಷಯ ತಿಳಿಸಿದ್ದು, ಬಸವಣ್ಣನವರ ಜೀವನ ಹಾಗೂ ತತ್ವ ಸಿದ್ಧಾಂತಗಳನ್ನೊಳಗೊಂಡ ಯಕ್ಷಗಾನ ಪ್ರಸಂಗವನ್ನು ಕಳೆದ ಏಳು ವರ್ಷದಿಂದ ರಾಜ್ಯ ಮತ್ತು ದೇಶದ ವಿವಿಧೆಡೆ ಪ್ರದರ್ಶಿಸಲಾಗಿದೆ. ಈ ವರೆಗೆ 152 ಪ್ರದರ್ಶನ ನೀಡಿದ್ದು, 200ನೇ ಪ್ರದರ್ಶನವನ್ನು ಕೂಡಲಸಂಗಮದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಮೇ 2ರಂದು ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ರುದ್ರೇಗೌಡ ವಹಿಸುವರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಪಾಲ್ಗೊಳ್ಳುವರು ಎಂದಿದ್ದಾರೆ. ಬಸವಕೇಂದ್ರ ಸ್ವಾಮೀಜಿ ಗೋಷ್ಠಿಯಲ್ಲಿದ್ದರು.