ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಸ್ತೆ ಅವ್ಯವಸ್ಥೆ: ಪ್ರತಿಭಟನೆ 6ರಂದು

Rashmi Kasaragodu
Updated On : 2 May 2014, 11:09 am

ಹೊಸನಗರ: ತಾಲೂಕಿನ ಮಾಸ್ತಿಕಟ್ಟೆ- ಯಡುರು-ತೀರ್ಥಹಳ್ಳಿ ಸಂಪರ್ಕದ ಜಿಲ್ಲಾ ಮುಖ್ಯ ರಸ್ತೆ ದುರಾವಸ್ಥೆಗೆ ಗುತ್ತಿಗೆದಾರ ಹಾಗೂ ಎಂಜಿನಿಯರ್ ಇವರ ಬೇಜವಾಬ್ದಾರಿ ವರ್ತನೆ ಖಂಡಿಸಿ ಯಡೂರು, ಸುಳಗೋಡು, ಮಾಸ್ತಿಕಟ್ಟೆ ಗ್ರಾಮದ ಕಾಂಗ್ರೆಸ್ ಘಟಕದ ವತಿಯಿಂದ ಮೇ 6ರಂದು ಹೊಸನಗರದ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಕಾಂಗ್ರೆಸ್ ಮುಖಂಡ ಯಡೂರು ರತ್ನಾಕರ ಗೌಡ ತಿಳಿಸಿದ್ದಾರೆ.
ಸಚಿವ ಕಿಮ್ಮನೆ ರತ್ನಾಕರ್ ಈ ರಸ್ತೆ ಮರು ಡಾಂಬರೀಕರಣಕ್ಕೆ ಹಣ ಮಂಜೂರು ಮಾಡಿಸಿದರೂ 2 ವರ್ಷ ಕಳೆದರೂ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇವರ ಬೇಜವಾಬ್ದಾರಿ ಕೆಲಸದ ಕಾರಣ ಕಾಮಗಾರಿ ವಿಳಂಬ ಆಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಶಿವಮೊಗ್ಗ, ಬಳ್ಳಾರಿ, ದಾವಣಗೆರೆಗಳಿಂದ ತೀರ್ಥಹಳ್ಳಿ ಮಾರ್ಗವಾಗಿ ಮಂಗಳೂರು ತಲುಪಲು ಇದು ಅತ್ಯಂತ ಸಮೀಪದ ರಸ್ತೆ ಅಗಿದೆ. ಈ ರಸ್ತೆಯಲ್ಲಿ ದಿನಕ್ಕೆ ಸುಮಾರು 90ಕ್ಕೂ ಹೆಚ್ಚು ಬಸ್‌ಗಳು ಹಗಲು- ರಾತ್ರಿ ಸಂಚರಿಸುತ್ತಿದೆ.
ಆದರೆ, ಈ ರಸ್ತೆ ಹಣ ಮಂಜೂರಾಗಿ ಇಬ್ಬರು ಗುತ್ತಿಗೆದಾರರು ಟೆಂಡರ್ ಪಡೆದರೂ ಕಾಮಗಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸೂಕ್ತ ಸಮಯದಲ್ಲಿ ಕಾರ್ಯ ನಿರ್ವಹಿಸದ ಹಣ ಮಂಜೂರು ಮಾಡಿಸಿದ ಸಚಿವರ ಇವರ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕೂಡಲೆ ಕಾಮಗಾರಿ ಪೂರ್ಣಗೊಳಿಸಲು ಈ ಪ್ರತಿಭಟನೆ ಅನಿವಾರ್ಯ ಆಗಿದೆ ಎಂದರು.
ಪ್ರತಿಭಟನೆಯಲ್ಲಿ ಯಡುರು, ಸುಳಗೋಡು ಹಾಗೂ ಮಾಸ್ತಿಕಟ್ಟೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸುವಂತೆ ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement