ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೆನ್ನೈ ಅವಳಿ ಬಾಂಬ್ ಸ್ಫೋಟ: ಬಿಜೆಪಿ ಖಂಡನೆ

Rashmi Kasaragodu
Updated On : 3 May 2014, 11:32 am


ಶಿವಮೊಗ್ಗ: ಬೆಂಗಳೂರು- ಚೆನ್ನೈನಲ್ಲಿ ಸೆಂಟ್ರಲ್ ರೇಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಜಿಲ್ಲಾ ಬಿಜೆಪಿ ಖಂಡಿಸಿದ್ದು, ಭಯೋತ್ಪಾದಕರ ಈ ದುಷ್ಕೃತ್ಯ ಖಂಡನಾರ್ಹ. ಸ್ಫೋಟದಲ್ಲಿ ಮರಣಹೊಂದಿದ ಯುವತಿ ಸ್ವಾತಿಯ ಕುಟುಂಬಕ್ಕೆ ಭಗವಂತ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ.
ಭಯೋತ್ಪಾದಕರ ಈ ಕೃತ್ಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯನೂರು ಮಂಜುನಾಥ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಪಿ.ವಿ. ಕೃಷ್ಣಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆರ್.ಕೆ. ಸಿದ್ದರಾಮಣ್ಣ, ಎಂ.ಬಿ.ಭಾನುಪ್ರಕಾಶ್, ಭಾರತಿ ಶೆಟ್ಟಿ, ರೈತಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಬಿಜೆಪಿ ಮುಖಂಡರಾದ ಗಿರೀಶ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ನಗರ ಬಿಜೆಪಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಜಿಲ್ಲಾ ಮುಖಂಡರಾದ ರುದ್ರೇಗೌಡರು, ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಪಿ. ಪುರುಷೋತ್ತಮ ಖಂಡಿಸಿದ್ದಾರೆ.



ರಥೋತ್ಸವ
ಹೊಸನಗರ:  ತಾಲೂಕಿನ ಹುಲಿಕಲ್ ಘಾಟಿಯ ಬಾಳೆಬರೆ ಚಂಡಿಕಾಂಬಾದೇವಿ ರಥೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಭಕ್ತರ ಜಯಘೋಷದಲ್ಲಿ ಅದ್ಧೂರಿಯಾಗಿ ನೆರವೇರಿತು. ದೇವಿಯ ಮಹಾ ರಥೋತ್ಸವದ ಅಂಗವಾಗಿ 108 ಕಾಯಿ ಮಹಾಗಣಪತಿಯಾಗ, ಕಲಾತತ್ವ ಹೋಮ, ಶ್ರೀ ಚಂಡಿಕಾ ಯಾಗ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ಜರುಗಿತು. ಸಂಜೆ ದೇವಿಯ ರಾಜಬೀದಿಯ ಉತ್ಸವ ವಿವಿಧ ಜಾನಪದ ಕಲಾತಂಡಗಳ ವೈಭವ ಮತ್ತು ವೇದಘೋಷ, ವಾದನದೊಂದಿಗೆ ಪ್ರಮುಖ ಮಾರ್ಗದಲ್ಲಿ ಸಾಗಿ ಬಂದಿತು. ದೇವಳದ ಧರ್ಮದರ್ಶಿ ಮೋಹನ ನಂಬಿಯಾರ್, ದೇವಸ್ಥಾನದ ಪ್ರತಿನಿಧಿಗಳು, ಹುಲಿಕಲ್ ಮತ್ತು ಮಾಸ್ತಿಕಟ್ಟೆಯ ಪ್ರಮುಖರು ಉಪಸ್ಥಿತರಿದ್ದರು.
ಅಕ್ರಮ ಸೀಮೆಎಣ್ಣೆ: ವ್ಯಕ್ತಿ ಸೆರೆ
ಭದ್ರಾವತಿ: ಸಾರ್ವಜನಿಕ ವಿತರಣೆಗೆ ಮೀಸಲಾಗಿದ್ದ ಸೀಮೆಎಣ್ಣೆಯನ್ನು ಇತ್ತೀಚೆಗೆ ಅಕ್ರಮವಾಗಿ ಲಾರಿಯೊಂದರಿಂದ ಇಳಿಸುತ್ತಿದ್ದಾಗ ಪೊಲೀಸರು ಪತ್ತೆ ಹಚ್ಚಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರಕ್ಷಕ ವೃತ್ತ ನಿರೀಕ್ಷಕ ಜೆ.ಜೆ. ತಿರುಮಲೇಶ್, ನ್ಯೂಟೌನ್ ಸಬ್ ಇನ್ಸ್‌ಪೆಕ್ಟರ್ ಸಂದೀಪ್ ಮತ್ತು ಸಿಬ್ಬಂದಿ ಅಕ್ರಮವನ್ನು ಪತ್ತೆ ಹಚ್ಚಿ ಲಾರಿ ಚಾಲಕ ಅನ್ವರ್ ಕಾಲೋನಿ ವಾಸಿ ಫಯಾಜ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಹಾಗೂ ಒಂದು ಮಾರುತಿ ಓಮ್ನಿ ವ್ಯಾನ್‌ಅನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯ ಆರೋಪಿ ಎಂದು ಹೇಳಲಾಗಿರುವ ಜನ್ನಾಪುರದ ಮಹೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಫಯಾಜ್‌ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೆಂಡದಾರ್ಚನೆ
ಶಿವಮೊಗ್ಗ: ಜಿಲ್ಲಾ ಸಾಧುಶೆಟ್ಟಿ ಸಂಘ(24ಮನೆ ತೆಲುಗು ಚಿಟ್ಟಿ) ಹಾಗೂ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಸಮಿತಿಯು ಕೆಂಡದಾರ್ಚನಾ ಮಹೋತ್ಸವವನ್ನು ಮೇ 21ರಂದು ಬೆಳಿಗ್ಗೆ 11.30ರಿಂದ ಹಮ್ಮಿಕೊಂಡಿದೆ. ಭಕ್ತಾಧಿಗಳು ಹರಕೆ, ಕಾಣಿಕೆ ಹಾಗೂ ಸಾಮಾಗ್ರಿಗಳನ್ನು ಸಲ್ಲಿಸುವವರು ಎಸ್.ಆರ್.ಸೂರಪ್ಪ (9891313989) ಅವರನ್ನು ಸಂಪರ್ಕಿಸಬಹುದು ಎಂದು ಸಮಿತಿ ಕೋರಿದೆ.
ಕಾರ್ಯಾಗಾರ ನಾಳೆ
ಶಿವಮೊಗ್ಗ:  ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ- 2014ಕ್ಕೆ ತಯಾರಿಯಾಗಲು ಅನುಕೂಲ ಆಗುವಂತೆ ಟಾಪರ್ಸ್ ಕೋಚಿಂಗ್ ಸೆಂಟರ್ ಉಚಿತ ಮಾಹಿತಿ ಹಾಗೂ ಕಾರ್ಯಾಗಾರ ಹಮ್ಮಿಕೊಂಡಿದೆ. ಮೇ 4ರಂದು ಬೆಳಗ್ಗೆ 10 ಗಂಟೆಗೆ ನಗರದ ಸವಳಂಗ ರಸ್ತೆಯ ಸಂಸ್ಥೆಯ ಆವರಣದಲ್ಲಿ ಕಾರ್ಯಾಗಾರ ನಡೆಯುಲಿದ್ದು ಆಸಕ್ತರು ಮೊ.7204321213 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement