ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾರ್ಶ್ವನಾಥ ಸ್ವಾಮಿಗೆ ಮಹಾಭಿಷೇಕ

Rashmi Kasaragodu
Updated On : 4 May 2014, 1:33 am

ಹೊಸನಗರ: ತಾಲೂಕಿನ ಶ್ರೀ ಕ್ಷೇತ್ರ ಹೊಂಬುಜದ ಗುಡ್ಡದ ಬಸದಿಯ ತ್ರಿಕೂಟ ಜಿನಾಲಯದಲ್ಲಿ ಅಕ್ಷಯ ತದಿಗೆಯ ದಿನದಂದು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಹಾಗೂ ಭಗವಾನ್ ಬಾಹುಬಲಿ ಸ್ವಾಮಿಗೆ ವಿಶೇಷ ಪೂಜೆ ಮತ್ತು 108 ಕಳಶಗಳ ಮಹಾಭಿಷೇಕ ಕಾರ್ಯಕ್ರಮವು ಜಗದ್ಗುರು ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿತು. ರಾಜ್ಯ ಮತ್ತು ಹೊರರಾಜ್ಯದ ಭಕ್ತಾದಿಗಳು ಭಾಗವಹಿಸಿದ್ದರು.
ಪ್ರತಿಷ್ಠಾಪನಾ ಮಹೋತ್ಸವ ಇಂದಿನಿಂದ
ಸೊರಬ:  ತಾಲೂಕಿನ ಎನ್.ದೊಡ್ಡೇರಿಯಲ್ಲಿ ಮೇ 4, 5ರಂದು ಶ್ರೀರಾಮಚಂದ್ರ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ. 4ರಂದು ಪಂಚಗವ್ಯ, ವಾಸ್ತು ಹವನ, ಕಳಸ ಪ್ರತಿಷ್ಠಾಪನೆ, ಅಷ್ಟಾವಧಾನ, 5ರಂದು ಮೂರ್ತಿ ಪ್ರತಿಷ್ಠಾಪನೆ, ಕಲಾವೃದ್ಧಿ ಹೋಮ, ಶ್ರೀರಾಮತಾರಕ ಹವನ, ಕುಂಭಾಭಿಷೇಕ, ಭಜನಾವಳಿ, ರಾತ್ರಿ ಗ್ರಾಮದ ರಾಮೇಶ್ವರ ಕಲಾನಾಟ್ಯ ಸಂಘದಿಂದ ಬೇಡ್ಕಣಿ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯವರ ರಾಜ ವಿಕ್ರಮ ಶೀರ್ಷಿಕೆಯ ಬಯಲಾಟ ನಡೆಯಲಿದೆ. ಶಿಗ್ಗಾಂವ್ನ ಗುರು ಆರ್.ವಿ.ಕಮ್ಮಾರ್ರಿಂದ ಚಾಲನೆ.


ಮಠ, ಮಂದಿರ ಸಂಸ್ಕೃತಿ ಉಳಿಸಿ


ಸಾಗರ: ಪ್ರಾಚೀನ ಪರಂಪರೆ ಉಳಿಸುವ ಮಠ-ಮಂದಿರ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಜಿಪಂ ಸದಸ್ಯ ಹುಣವಳ್ಳಿ ಗಂಗಾಧರಪ್ಪ ಹೇಳಿದರು. ಇಲ್ಲಿಗೆ ಸಮೀಪದ ಸೆಟ್ಟಿಸರ ಶನೈಶ್ಚರ ದೇವಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನೈಶ್ಚರ ಕ್ಷೇತ್ರಕ್ಕೆ ನೀಡಿದ 1 ಲಕ್ಷ ಅನುದಾನದ ಚೆಕ್ ವಿತರಿಸಿ ಮಾತನಾಡಿದರು.   ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ ಮಾತನಾಡಿ, ಧಾರ್ಮಿಕ ಕೇಂದ್ರಗಳು ಜನಮುಖಿಯಾಗಿ ಕಾರ್ಯನಿರ್ವಹಿಸಬೇಕು. ಅನಾದಿ ಕಾಲದಿಂದ ಇರುವ ನೈಜವಾದ ನಂಬಿಕೆ ಉಳಿಸುವಲ್ಲಿ ಮಠ-ಮಂದಿರಗಳ ಪಾತ್ರ ಮುಖ್ಯ. ಜಾತಿಗಳ ಹೆಸರಿನಲ್ಲಿ ದೇವಾಲಯ ಕಟ್ಟುತ್ತಿರುವುದು ಅಪಾಯದ ಸಂಕೇತ. ಜಾತ್ಯತೀತ ಮನೋಭಾವ ಬೆಳೆಸುವ ಶ್ರದ್ಧಾ ಕೇಂದ್ರಗಳ ನಿರ್ಮಾಣ ಹೆಚ್ಚು ಆಗಬೇಕು ಎಂದರು. ಸೆಟ್ಟಿಸರ ಶನೈಶ್ಚರ ಟ್ರಸ್ಟ್ ಅಧ್ಯಕ್ಷರಾದ ಎಸ್.ಆರ್.ಭಟ್ ಭಡ್ತಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜನಾಧಿಕಾರಿ ಸುನಿತ ನಾಯ್ಕ, ಪಾತ್ರಿ ದುರ್ಗಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಗಣೇಶ್ ನಾಯಕ್, ಧರ್ಮದರ್ಶಿ ಶ್ರೀನಿವಾಸ ಸೇರೆಗಾರ್, ಉಪಾಧ್ಯಕ್ಷ ಕೆ.ಆರ್. ನಾರಾಯಣರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement