ರಾಂದೇವ್ ಬಂಧನಕ್ಕೆ ಆಗ್ರಹ
ಶಿವಮೊಗ್ಗ: ಬಾಬಾ ರಾಂದೇವ್ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ವಿರುದ್ಧ ನಗರಗದ ವಿನೋಬನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗಾಗಿ ಅವರನ್ನು ಬಂಧಿಸಬೇಕು ಎಂದು ದೂರುದಾರ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಮೇಲ್ಜಾತಿಗೆ ಸೇರಿದ ಬಾಬಾ ರಾಂದೇವ್ ಅವರು ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡುವಾಗ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೈಲಿತ ಸಮುದಾಯ ನಿಂದಿಸಿ ಮಾನಸಿಕ ನೋವುಂಟು ಮಾಡಿದ್ದಾರೆ ಎಂದರು. ಕೋಮು ಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್, ಬಿಜೆಪಿ ನಾಯಕರು ಇದೂವರೆಗೂ ರಾಮ್ ದೇವ್ ಅವರ ಹೇಳಿಕೆ ಖಂಡಿಸಿಲ್ಲ. ರಾಮ್ದೇವ್ ಬಿಜೆಪಿ ಏಜೆಂಟ್. ಸಂಘಪರಿವಾರಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ದಲ್ಲಾಳಿ ಎಂದು ಟೀಕಿಸಿದರು. ನಮ್ಮ ಹಕ್ಕು ವೇದಿಕೆಯ ಕೆ.ಪಿ. ಶ್ರೀಪಾಲ್, ರಾಮ್ ದೇವ್ ಅವರು ಇಡೀ ದಲಿತ ಸಮುದಾಯವನ್ನು ಅವಮಾನ ಮಾಡಿದ್ದರೂ ಬಿಜೆಪಿಯವರು ಸುಮ್ಮನಿರವುದು ಸರಿ ಅಲ್ಲ ಎಂದು ಟೀಕಿಸಿದರು. ಚಿಕ್ಕಮರಡಿ ರಮೇಶ್, ಬೊಮ್ಮನಕಟ್ಟೆ ಕೃಷ್ಣ, ಮಹದೇವ್, ಹರಿಗೆ ರವಿ ಹಲವರು ಇದ್ದರು.