ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಭಿವೃದ್ಧಿಗೆ ಸ್ಥಳೀಯರ ಕಡೆಗಣನೆ ಸಲ್ಲ

Rashmi Kasaragodu
Updated On : 5 May 2014, 11:44 am

ಕ.ಪ್ರ.ವಾರ್ತೆ    ತ್ಯಾಗರ್ತಿ    ಮೇ 4
ವನ್ಯಜೀವಿಗಳಾದ ಜಿಂಕೆ, ಮೊಲ, ಹಂದಿ, ಹುಲಿ, ಚಿರತೆ ಇನ್ನೂ ಹಲವಾರು ಪ್ರಾಣಿಗಳ ಅಭಿವೃದ್ಧಿ, ಸಂರಕ್ಷಣೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಅರಣ್ಯ ಪ್ರದೇಶಗಳಲ್ಲಿ ಇಂಗು ಗುಂಡಿ, ಕೆರೆ ಅಭಿವೃಧ್ಧಿಯಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಕಾನುಗೋಡು ವಲಯ ಸೀಮಾ ಪರಿಷತ್ತಿನ ಅಧ್ಯಕ್ಷ ಬಿ.ಜಿ. ರಾಜಾರ್ಛಾಜಜ ಭಟ್ ಶ್ಲಾಘಿಸಿದ್ದಾರೆ.
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬಿಲಗುಂಜಿ ಗ್ರಾಮದ ಸರ್ವೆ ನಂ.24ರಲ್ಲಿ ಅರಣ್ಯ ಇಲಾಖೆ ಕೈಗೊಂಡ ಲಕ್ಷಾಂತರ ರೂಪಾಯಿ ವೆಚ್ಚದ ಕೆರೆಗಳ ಪುನರ್ ನಿರ್ಮಾಣ, ಇಂಗು ಗುಂಡಿ ನಿರ್ಮಾಣದಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಸ್ಥಳೀಯ ಗ್ರಾಮಸ್ಥರು ಹಾಗೂ ಜನ ಪ್ರತಿನಿಧಿಗಳನ್ನು ನಿರ್ಲಕ್ಷಿಸಬಾರದು. ಅಲ್ಲದೇ ಅರಣ್ಯದ ಅಭಿವೃದ್ಧಿಗೆ ತಮ್ಮ ಸಹಕಾರ, ಸಲಹೆಗಳನ್ನು ನೀಡಲು ಸದಾ ಸಿದ್ದ ಎಂದರು.
 ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಅರಣ್ಯದಲ್ಲಿರುವ ಬೆಲೆ ಬಾಳುವ ಮರಗಳು ಸರ್ವನಾಶವಾದ ಮೇಲೆ ಒತ್ತುವರಿ ತೆರವು ಕಾರ್ಯಾಲಯವನ್ನು ಇಲಾಖೆ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಇವರು, ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಕಾಡು ಜಾತಿಯ ಗಿಡಗಳಾದ ನೇರಳೆ, ಹೊನ್ನೆ, ಹುಣಾಲು, ಹುಣಸೆ, ಹಾಗೂ ಹಣ್ಣು  ಮತ್ತು ವನಸ್ಪತಿ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement