ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಿ: ಕಾಗೋಡು

Rashmi Kasaragodu
Updated On : 5 May 2014, 11:47 am

ಸಾಗರ: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ವರ್ಷಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಸಂಜೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಚಾಲನೆ ನೀಡಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮುಂದಿನ ಒಂದು ವರ್ಷ ಕಾಲ ನೂರು ಕಾರ್ಯಕ್ರಮ ಆಯೋಜಿಸುವ ಸಂಕಲ್ಪ ಮಾಡಿತು.
ಕಲಾಪ್ರಕಾರಗಳನ್ನು ಉಳಿಸಿ: ಪರಿಷತ್ತಿನ ಶತಮಾನೋತ್ಸವ ವರ್ಷಾಚರಣೆಗೆ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ನಮ್ಮ ಪರಂಪರೆಯನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿರುವ ಕಲಾಪ್ರಕಾರಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನಾಂಗ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ತಮ್ಮ 80ನೆಯ ವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಯಕ್ಷ ರಂಗಭೂಮಿಕೆಯಲ್ಲಿ ಅಭಿನಯಿಸುವ ವಿಧಾನವನ್ನು ಯುವಜನರು ಅನುಸರಿಸಬೇಕು. ಇಂತಹ ಅಪೂರ್ವ ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಗೌರವ ಹೆಚ್ಚುವಂತೆ ಮಾಡಿದೆ ಎಂದರು.
ಪರಿಷತ್ತಿನ ಶತಮಾನೋತ್ಸವ ವಷರಾಚರಣೆ ಕುರಿತು ಆಶಯ ಭಾಷಣ ಮಾಡಿದ ಸಾಹಿತಿ ಡಾ.ನಾ.ಡಿಸೋಜ, ಕನ್ನಡಿಗರ ಅಧೀನ ಸಂಸ್ಥೆ ಸಾಹಿತ್ಯ ಪರಿಷತ್ಶ್‌ತಮಾನೋತ್ಸವ ಆಚರಿಸುತ್ತಿರುವುದು ನಾಡಿನ ಜನರು ಹೆಮ್ಮೆ ಪಡುವಂತಹದ್ದಾಗಿದೆ. ಬೆಂಗಳೂರಿನಲ್ಲಿ 1915ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ನ್‌ಂತರದ ದಿನಗಳಲ್ಲಿನಾಡಿನ ಮೂಲೆಮೂಲೆಯಲ್ಲಿ ಭಾಷೆ, ಸಾಹಿತ್ಯ ಹಾಗೂ ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ತನ್ನದೆ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಲಾವಿದರಿಗೆ ಪ್ರೇಕ್ಷಕರು ಪ್ರೋತ್ಸಾಹಿಸುವುದೆ ಪ್ರಶಸ್ತಿಗಿಂತ ಹೆಚ್ಚಿನದ್ದು. ಯಾವುದೇ ವ್ಯಕ್ತಿ ಜನರ ಪ್ರೋತ್ಸಾಹವಿಲ್ಲದೆ ಬೆಳೆಯಲಾರ. ಅದರಲ್ಲಿಯೂ ಕಲಾವಿದ ಪ್ರೇಕ್ಷಕರ ಪ್ರೋತ್ಸಾಹದಿಂದ ಮಾತ್ರ ಸಾಧನೆ ಮಾಡಬಲ್ಲ ಎಂದರು.
ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ದ್‌ತ್ತಮೂರ್ತಿ ಭಟ್ ಅಭಿನಂದನಾ ಭಾಷಣ ಮಾಡಿದರು. ಜಿ.ನಾಗೇಶ್ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿ.ಯೋಗೀಶ್ವ್‌ಂದಿಸಿದರು. ರಾಜೇಂದ್ರ ಆವಿನಹಳ್ಳಿ ನಿರೂಪಿಸಿದರು. ನಂತರ ಸಂಗಮದೆಡೆಗೆ ಯಕ್ಷ ನಡಿಗೆ ಕಾರ್ಯಕ್ರಮದ ಅಂಗವಾಗಿ ನಾಟ್ಯಶ್ರೀ ಕಲಾತಂತದ ಕಲಾವಿದರಿಂದ ಲಂಕಾ ದಹನ  ಯಕ್ಷಗಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement