ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗ್ರಾಮೀಣ ಕ್ರೀಡೆ ಕಡೆಗಣನೆ: ವಿಷಾದ

Rashmi Kasaragodu
Updated On : 5 May 2014, 11:47 am

ಸಾಗರ: ಯುವಜನರು ಗ್ರಾಮೀಣ ಕ್ರೀಡೆಗಳನ್ನು ದೂರ ತಳ್ಳಿ ದಿಢೀರ್ ಹೆಸರು ಗಳಿಸಬೇಕು ಎನ್ನುವು ಉದ್ದೇಶದಿಂದ ಕ್ರಿಕೆಟಿನಂತಹ ಕ್ರೀಡೆಯತ್ತ ಮುಖ ಮಾಡಿರುವುದು ವಿಷಾದದ ಸಂಗತಿ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಶಿವಪ್ಪನಾಯಕ ಸ್ನೇಹಿತರು ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರಿಕೆಟ್ ಮಾತ್ರ ಕ್ರೀಡೆ ಎನ್ನುವ ಮನೋಭಾವ ಹೆಚ್ಚುತ್ತಿದೆ. ಆರಂಭದಲ್ಲಿ ಕ್ರಿಕೆಟ ಶ್ರೇಷ್ಠತೆಯನ್ನು ಕಾಪಾಡಿಕೊಂಡಿತ್ತು. ಕ್ರಿಕೇಟ್ ಅವಲಂಭಿಸುವವರ ಸಂಖ್ಯೆ ಹೆಚ್ಚಿದಂತೆ ಅದಕ್ಕೂ ಅಪವಾದಗಳು ಸುತ್ತಿಕೊಳ್ಳುತ್ತಿದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಪ್ರವೇಶದಿಂದಾಗಿ ಅದು ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತಿದೆ. ಇಂತಹ ಕ್ರೀಡೆಯನ್ನು ಮೈಗೂಡಿಸಿಕೊಳ್ಳುವುದರಿಂದ ಉನ್ನತ ಸಾಧನೆ ಸಾಧ್ಯವಿಲ್ಲ ಎಂದರು.
ಕಬಡ್ಡಿ, ಲಗೋರಿ ಹಾಗೂ ಕುಸ್ತಿಯಂತಹ ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಆಗಬೇಕಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ಗ್ರಾಮೀಣ ಕ್ರೀಡೆಗಳಲ್ಲಿ ಯುವಜನರು ತೊಡಗಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಲ್ಗೊಂಡಾಗ ದುಶ್ಚಟದಿಂದ ದೂರ ಇರಬಹುದು ಎಂದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಗರಾಜ ಸುಬ್ರು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಗಣಾಧೀಶ್, ಉಷಾ, ಉದ್ಯಮಿಗಳಾದ ಬದ್ರುದ್ಧೀನ್, ಆನಂದ ಮರಕಾಲ, ರವೀಂದ್ರ ಎಚ್.ಬಿ. ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement