ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪರಿಸರ ಜಾಗೃತಿ 'ಅನಾವರಣ'

Rashmi Kasaragodu
Updated On : 5 May 2014, 11:47 am

ಕ.ಪ್ರ.ವಾರ್ತೆ    ಶಿವಮೊಗ್ಗ    ಮೇ 4
ಮಲೆನಾಡ ನಗರಿಗೆ ಮೊಟ್ಟಮೊದಲು ಫ್ಲಾಷ್ ಮಾಬ್ ಪರಿಚಯಿಸಿದ ಸ್ಟೆಪ್ ಹೋಲ್ಡರ್ಸ್ ನೃತ್ಯ ತಂಡವು ಈ ಬಾರಿ ಪರಿಸರ ಜಾಗೃತಿಗಾಗಿ ನಗರದ ಹಲವು ವೃತ್ತಗಳಲ್ಲಿ ಅನಾವರಣ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
'ಕನ್ನಡಪ್ರಭ' ಹಾಗೂ 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ಮಾಧ್ಯಮ ಸಹಯೋಗ ನೀಡಿದ್ದ ಈ ಕಾರ್ಯಕ್ರಮವು ಶನಿವಾರ ಸಂಜೆಯಿಂದ ರಾತ್ರಿಯ ವರೆಗೆ ನಗರದ ವಿವಿಧ ವೃತ್ತಗಳಲ್ಲಿ ನಡೆಯಿತು. ನೂರಾರು ಮಕ್ಕಳು ವಿವಿಧ ಗೀತೆಗಳಿಗೆ ರಸ್ತೆಯ ಮೇಲೆಯೇ ನೃತ್ಯ ಪ್ರದರ್ಶಿಸಿದರು. ಅಲ್ಲದೇ ಪರಿಸರ ಜಾಗೃತಿಯ ಘೋಷಣೆಯನ್ನು ಒಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಲ್ಲದೇ ಅವುಗಳನ್ನು ಅದೇ ವೃತ್ತದ ವಿವಿಧೆಡೆ ಉಳಿಸಿ ಹೋದರು.
ನೃತ್ಯ ಪ್ರದರ್ಶನ: ಪ್ರಮುಖವಾಗಿ ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತ, ವಿನೋಬ ನಗರ ಪೊಲೀಸ್ ಚೌಕಿ, ಲಕ್ಷ್ಮೀ ಟಾಕೀಸ್ ವೃತ್ತ ಸೇರಿದಂತೆ ಹಲವೆಡೆ ನೂರಾರು ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಪ್ರತಿ ವೃತ್ತದಲ್ಲಿಯೂ ಸಹ ಪರಿಸರ ಜಾಗೃತಿಯ ಘೋಷಣೆ ಬರೆದಿದ್ದ 5 ಪ್ಲೇಕಾರ್ಡ್‌ಗಳನ್ನು ಸ್ಥಳೀಯರಿಗೆ ನೀಡಿದರು. ಅಲ್ಲದೇ ಕರಪತ್ರವನ್ನೂ ವಿತರಿಸಿದರು.
ಸುಮಾರು ಒಂದು ತಿಂಗಳುಗಳ ಕಾಲ ಸ್ಪೆಪ್ ಹೋಲ್ಡರ್ಸ್ ಸಂಸ್ಥೆ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಈ ಪ್ಲಾಷ್ ಮಾಬ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿಲ್ಲರ್ ಪಾರ್ಟಿ ಸಿನಿಮಾದ ಆಜಾರೇ ಚೋಕರೆ... ಹಾಡಿಗೆ ಮಕ್ಕಳು ಕುಣಿದು ಕುಪ್ಪಳಿಸಿದರು. ನಂತರ ಚಪ್ಪಾಳೆ... ಚಪ್ಪಾಳೆ... ಎಂಬ ಹಾಡಿಗೆ ಒಂದು ವೃತ್ತದಿಂದ ಇನ್ನೊಂದು ವೃತ್ತಕ್ಕೆ ಸಾಗಿದರು. ಅರುಣ್ ರಾಜ್ ಶೆಟ್ಟಿ, ಚನ್ನೇಶ್, ಸೌಂದರ್ಯ ಶೆಟ್ಟಿ, ಅಂಥೋಣಿ ರಾಸ್ಟಿನ್, ವಿಕಾಸ ಗೌಡ, ಕಿರಣ್, ಸುದರ್ಶನ್, ನವೀನ್, ಗುಲ್ಷನ್, ಚೈತ್ರಾ, ಅಭಿ ಸೇರಿದಂತೆ ಹಲವರು ತಂಡವನ್ನು ಮುನ್ನಡೆಸಿದರು.
ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ 'ಅನಾವರಣ' ನಗರದ ಕುವೆಂಪು ರಂಗಮಂದಿರದಲ್ಲಿ ಮೇ 6ರಂದು ಸಂಜೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement