ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಾಮಿಗಳು ಭಕ್ತರ ಕಷ್ಟ ನೀಗಿಸಲಿ: ದಿಂಗಾಲೇಶ್ವರ ಶ್ರೀ

Rashmi Kasaragodu
Updated On : 5 May 2014, 11:47 am

ಶಿರಾಳಕೊಪ್ಪ: ಸ್ವಾಮಿಗಳಾದವರು ಭಕ್ತರ ಮನೆಗೆ ಹೋದಾಗ ಅವರ ದುಃಖವನ್ನು ವಾಪಸ್ ಬರುವಾಗ ತೆಗೆದುಕೊಂಡು ಹೋಗಬೇಕೆ ವಿನಹ ಭಕ್ತರಿಗೆ ದುಃಖ ಉಂಟು ಮಾಡಬಾರದು ಎಂದು ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
 ರಾಜ್ಯದ ಮೂಲೆಮೂಲೆಗಳಲ್ಲಿ ಸಾವಿರಾರು ಸ್ಥಳಗಳಲ್ಲಿ ಸತತ ಪ್ರವಚನ ಮಾಡಿ ಹಲವಾರು ಬಿರುದು ಪಡೆದಂತಹ ದಿಂಗಾಲೇಶ್ವರ ಸ್ವಾಮಿಗಳನ್ನು  ಬರಮಾಡಿಕೊಂಡ ಶಿರಾಳಕೊಪ್ಪ ಪಟ್ಟಣದ ಭಕ್ತರನ್ನು ಉದ್ದೇಶಿಸಿ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಮಾತನಾಡಿದರು.
ಭವನ ಲೋಕಾರ್ಪಣೆ: ಮೇ 23, 24, 25ರಂದು ಬಾಳೇಹೊಸೂರಿನಲ್ಲಿ ದಿಂಗಾಲೇಶ್ವರ ನೂತನಮಠ ಹಾಗೂ ದಾಸೋಹ ಭವನ ಲೋಕಾರ್ಪಣಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಆ ಕಾರ್ಯಕ್ರಮದಲ್ಲಿ ಎಲ್ಲರನ್ನು ಆಮಂತ್ರಿಸಲು ಆಗಮಿಸಿದ್ದೇನೆ ವಿನಹ ತಮ್ಮ ಬಳಿ ಏನನ್ನು ಕೇಳಲು ಬಂದಿಲ್ಲ ಎಂದರು.
ಲೋಕಾರ್ಪಣಾ ಕಾರ್ಯಕ್ರಮದ ಅಂಗವಾಗಿ 5001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ಬಾಗವಹಿಸುವ ಮಹಿಳೆಯರಿಗೆ ಒಂದೇ ತರಹದ ಸೀರಿ ಕೊಡಲಾಗುವದು ಎಂದರು.
ಮಹಿಳೆಯರಿಗೆ ಪುಷ್ಪ ವೃಷ್ಟಿ: ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಪುಷ್ಪವೃಷ್ಟಿ ನಡೆಸಲಾಗುವದು. ಇದೇ ಸಂಧರ್ಪದಲ್ಲಿ ಬಾಳೇಹೊಸೂರಿನ ದಿಂಗಾಲೇಶ್ವರ ಮಠದಲ್ಲಿ ಸಮಾಜದಲ್ಲಿ ದುಶ್ಚಟಗಳ ದಾಸರಾಗಿರುವ ಜನರನ್ನು ದುಶ್ಚಟಗಳಿಂದ ದೂರಮಾಡುವ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾಮಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷರಾದ ಡಾ.ಮುರಘರಾಜ್, ಡಾ. ನೀಲಕಂಠಪ್ಪ, ಸೂರಣಗಿ ಚಂದ್ರಶೇಖರಪ್ಪ, ಕುಬಸದ ರಾಜಣ್ಣ, ಹೆಚ್ ಎಂ ಗಂಗಮ್ಮ,ನವೇದಿತಾ ರಾಜು, ಪಪಂ ಮಾಜಿ ಅಧ್ಯಕ್ಷರಾದ ಚಂದ್ರಶೇಕರ, ರಟ್ಟಿಹಳ್ಳಿ ಲೋಕೇಶ್, ಅಕ್ಕನ ಬಳಗದ ಅಧ್ಯಕ್ಷೆ ರೂಪಾ ಹಾಲೇಶ್ ಮತ್ತು ಪದಾಧಿಕಾರಿಗಳು ಹಲವಾರು ಪ್ರಮುಖರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement