ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಮೇಶ್‌ಕುಮಾರ್ ವಿರುದ್ಧ ಪ್ರತಿಭಟನೆ

Rashmi Kasaragodu
Updated On : 6 May 2014, 11:04 am

ಶಿವಮೊಗ್ಗ: ಕೋಲಾರದಲ್ಲಿ ಶಾಸಕ ರಮೇಶ್‌ಕುಮಾರ್ ಬೆಸ್ಕಾಂ ಸಿಬ್ಬಂದಿಯನ್ನು ಕೊಚ್ಚಿರಿ, ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕವಿಪ್ರನಿನಿ ಎಲ್ಲಾ ಎಸ್ಕಾಂಗಳ ಸಂಘಗಳ ಒಕ್ಕೂಟ ಹೇಳಿದೆ.
ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬೆಸ್ಕಾಂ ಸಿಬ್ಬಂದಿ, ರಮೇಶ್‌ಕುಮಾರ್ ಹೇಳಿಕೆಯನ್ನು ಖಂಡಿಸಿ ಘೋಷಣೆ ಕೂಗಿದರು. ಶಾಸಕರ ಈ ರೀತಿಯ ಹೇಳಿಕೆಯಿಂದ ಸಿಬ್ಬಂದಿ ನೈತಿಕ ಸ್ಥೈರ್ಯ ಕುಸಿದಿದೆ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ರಾಜ್ಯದಲ್ಲಿ ಶೇ. 40ರಿಂದ 50ರಷ್ಟು ಹುದ್ದೆಗಳು ಖಾಲಿ ಇದ್ದು, ಶೇ. 200ಕ್ಕೂ ಹೆಚ್ಚು ಮಿಗಿಲಾಗಿ ಕಾರ್ಯಭಾರ ಹೊರೆ ಹೆಚ್ಚಾಗಿದೆ.   
 ವಿದ್ಯುತ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಸಿಬ್ಬಂದಿಗೆ ರಕ್ಷಣೆ ನೀಡಿ, ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.


ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರ ಸಾವು



ಶಿಕಾರಿಪುರ: ತೋಟದಲ್ಲಿನ ಕೃಷಿ ಹೊಂಡದಲ್ಲಿ ಎತ್ತುಗಳಿಗೆ ನೀರು ಕುಡಿಸಲು ತೆರಳಿದ ಬಾಲಕರಿಬ್ಬರು ಬಿದ್ದು, ಸಾವನ್ನಪ್ಪಿದ ಘಟನೆ ತಾಲೂಕಿನ ಕೆಂಗಟ್ಟೆಯಲ್ಲಿ ಭಾನುವಾರ ಸಂಜೆ ವೇಳೆಗೆ ಸಂಭವಿಸಿದೆ.
ಗ್ರಾಮದ ಜೀವನ್ (8) ಹಾಗೂ ಪ್ರಶಾಂತ್ ಮೃತಪಟ್ಟವರು. ಇವರು ತೋಟದಲ್ಲಿ ನಿರ್ಮಿಸಲಾದ ಕೃಷಿ ಹೊಂಡದಲ್ಲಿ ಎತ್ತುಗಳಿಗೆ ನೀರು ಕುಡಿಸಲು ಭಾನುವಾರ ಸಂಜೆ 6 ಗಂಟೆ ವೇಳೆಯಲ್ಲಿ ತೆರಳಿದ್ದರು.
  ಎತ್ತುಗಳು ಮನೆಗೆ ವಾಪಾಸಾದರೂ ಬಾಲಕರು ಬಾರದ ಬಗ್ಗೆ ಅನುಮಾನಗೊಂಡ ಪೋಷಕರು ಮಕ್ಕಳಿಗಾಗಿ ಹುಡುಕಾಡಿ ನಂತರ ಹೊಂಡದಲ್ಲಿ ಬಾಲಕರ ಶವವನ್ನು ಪತ್ತೆ ಮಾಡಿದ್ದಾರೆ. ಸಾವಿನಲ್ಲಿಯೂ ಪರಸ್ಪರ ಕೈ ಹಿಡಿದುಕೊಂಡಿದ್ದ ಮೃತ ಬಾಲಕರನ್ನು ವೀಕ್ಷಿಸಿದ ಸ್ಥಳೀಯರ ಕರಳು ಹಿಂಡಿದಂತಾಗಿತ್ತು.
  ಮೃತ ಬಾಲಕರ ಪೋಷಕರಾದ ಕೃಷ್ಣಪ್ಪ ಹಾಗೂ ಮಂಜಪ್ಪ ಸಹೋದರರಾಗಿದ್ದು ಇಬ್ಬರೂ ಗ್ರಾಮದಲ್ಲಿ ನೂತನ ಮನೆ ನಿರ್ಮಿಸಿ ಶನಿವಾರ ಗೃಹಪ್ರವೇಶ ನೆರವೇರಿಸಿದ್ದರು.
ಬಾಲಕರ ಸಾವಿನ ಸುದ್ದಿಯನ್ನು ತಿಳಿದು ಕೂಡಲೇ ಸಂಸದ ರಾಘವೇಂದ್ರ ಗ್ರಾಮದಲ್ಲಿನ ಬಾಲಕರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement