ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಸಕ ರಮೇಶ್ ಕುಮಾರ್ ಹೇಳಿಕೆಗೆ ಮೆಸ್ಕಾಂ ಖಂಡನೆ

Rashmi Kasaragodu
Updated On : 6 May 2014, 11:04 am

ಸೊರಬ: ಶಾಸಕ ರಮೇಶ್ ಕುಮಾರ್ ಅವರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಅವಹೇಳಕಾರಿ ಮಾತನಾಡಿದ್ದನ್ನು ಸೊರಬ ಮೆಸ್ಕಾಂ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರವಾಗಿ ಖಂಡಿಸಿದ್ದಾರೆ.
ಗ್ರಾಮೀಣ ಜನರ ಜೊತೆ ನಿರಂತರ ಸಂಪರ್ಕ ಮತ್ತು ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ನಮಗೆ, ಶಾಸಕ ರಮೇಶಕುಮಾರ್ ಅವರಾಡಿರುವ ಮಾತು, ನಮ್ಮ ಮತ್ತು ಜನತೆಯ ನಡುವೆ ಇರುವ ಭಾವನಾತ್ಮಕ ಸಂಬಂಧ ಕದಡುವಂತಹದ್ದು,ಇಂತಹ ಹೇಳಿಕೆಯಿಂದ ಜನರು ಉದ್ರಿಕ್ತಗೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂಬ ಅರಿವೇ ಇಲ್ಲದೇ ಮಾತನಾಡುತ್ತಿರುವ ಇವರ ಹೇಳಿಕೆ ಸಮಾಜಕ್ಕೆ ಉತ್ತಮ ಸಂದೇಶವಲ್ಲ ಎಂದರು.
ಮೆಸ್ಕಾಂ ನೌಕರರ ಸಂಘದ ಅದ್ಯಕ್ಷ ಎಚ್.ಪಿ. ಮಹೇಂದ್ರ, ಕಾರ್ಯದರ್ಶಿ ಹಾಲಪ್ಪ, ಸೊರಬ ಮೆಸ್ಕಾಂ ಎಇಇ ವೆಂಕಟೇಶ್ ರಾಯಚೂರ್, ಸಹಾಯಕ ಎಂಜಿನಿಯರ್ ಬಸವರಾಜ್, ಗುರುಪಾದಯ್ಯ, ರಾಜಪ್ಪ, ಜಯಂತ ನಾಯ್ಕ, ಸದಾಶಿವ, ಪ್ರಕಾಶ್, ಗಾಮಪ್ಪ, ಮಲ್ಲಿಕಾರ್ಜುನ ಗೌಡ, ಪುಟ್ಟಪ್ಪ, ನಾರಾಯಣ, ರಂಗನಾಥ, ಸತೀಶ, ಲಕ್ಷ್ಮಮ್ಮ, ಕೃಷ್ಣಪ್ಪ, ಅನಿತ ಮೊದಲಾದ ಸಿಬ್ಬಂದಿ ಸೋಮವಾರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement