ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಕಾಳಿದಾಸನ ಪರಿಚಯಿಸಿದ ಪರಮೇಶ್ವರ ಭಟ್ಟ'

Mainashree
Updated On : 13 May 2014, 10:15 am

ಶಿವಮೊಗ್ಗ: ಭಾರತ ಹೆಮ್ಮೆ ಪಡುವ ಒಬ್ಬ ಕಾಳಿದಾಸನನ್ನು ಕನ್ನಡಕ್ಕೆ ಪರಿಚಯಿಸಿದವರು ಎಸ್.ವಿ. ಪರಮೇಶ್ವರಭಟ್ಟರು. ಸಂಸ್ಕೃತ ಬಾರದ ನಮಗೆ ಕನ್ನಡದ ಮೂಲಕ ದಕ್ಕುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಕುವೆಂಪು ವಿವಿ ಪ್ರಸರಾಂಗದ ನಿರ್ದೇಶಕ ಪ್ರೊ. ಕೆ.ಕೇಶವಶರ್ಮ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಜೀವ ವಿಮಾ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸಂಯುಕ್ತವಾಗಿ ಜೀವ ವಿಮಾ ವಿಭಾಗೀಯ ಕಚೇರಿ ಆವರಣದಲ್ಲಿರುವ ಸಹ್ಯಾದ್ರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ. ಎಸ್.ವಿ. ಪರಮೇಶ್ವರಭಟ್ಟ ಅವರ ಶತಮಾನೋತ್ಸವ ಮತ್ತು ಡಾ. ಜಿ.ಎಸ್. ಶಿವರುದ್ರಪ್ಪ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾದನೆ ಸ್ಮರಣೆ: 1914ರಲ್ಲಿ ಜನಿಸಿದ ಪ್ರೊ. ಎಸ್.ವಿ. ಪರಮೇಶ್ವರಭಟ್ಟ ಅವರು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಜನಿಸಿದರು. ಅವರ ನೂರು ವರ್ಷದ ನೆನಪಲ್ಲೇ ಅವರು ಮಾಡಿದ ಸಾಧನೆಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಒಂದು ಸಣ್ಣ ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡಸಾಧನೆ ಮಾಡಿರುವುದನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದರು.
ಅತ್ಯಂತ ಕ್ಲಿಷ್ಠ ವಿಚಾರಗಳನ್ನು ಸರಳವಾಗಿ ಹೇಳುವ ಕಲೆ ಎಸ್.ವಿ.ಪಿ ಅವರದ್ದು. ಕುವೆಂಪು ಅವರ ಧ್ಯಾನದ ಸ್ಥಿತಿ, ಕಾರಂತರ ಗಾಂಭೀರ್ಯ, ಬೇಂದ್ರೆಯವರ ಶಬ್ದ ಗಾರುಡಿತನವಿಲ್ಲದೆ ಸರಳವಾಗಿ ಬರೆದವರು ಎಸ್.ವಿ.ಪಿ. ಎಂದು ವಿಶ್ಲೇಷಿಸಿದರು.
ಕನ್ನಡ ಬೆಳೆಸಬೇಕು: ಉಪನ್ಯಾಸಕ ಜಿ.ಎಸ್. ನಟೇಶ್, ಕನ್ನಡ ಭಾಷೆಯನ್ನು ಮೇಲಿನಿಂದ ಕಟ್ಟುವ ಬದಲು ಕೆಳಗಿಂದ ಕಟ್ಟುಲು ಶ್ರಮಿಸಬೇಕು. ಆ ಕಾರ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಗುತ್ತಿದೆ. ಜೀವ ವಿಮೆ ಕೊಟ್ಟ ಸಂತೋಷ ಅದನ್ನು ವಾಪಸ್  ಪಡೆಯುವಾಗಲು ಸಂತೋಷ ಸಿಗುವ ಸೇವೆ ಜೀವ ವಿಮೆಯಿಂದ ದೊರೆಯುವುದು ಜನರಲ್ಲಿ ನಂಬಿಕೆ, ವಿಶ್ವಾಸ ತುಂಬಿದೆ ಎಂದರು.
ಭಾರತೀಯ ಜೀವ ವಿಮಾದ ವಿಭಾಗೀಯ ಅಧಿಕಾರಿ ಎಂ. ಬಾಲಯೋಗಿ, ನಮ್ಮ ನಿತ್ಯದ ವ್ಯವಹಾರದ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಸಂಪರ್ಕದ ಮೂಲಕ ಮುದನೀಡುವ ಸಂದರ್ಭ ಒದಗಿರುವುದನ್ನು ಸಂಭ್ರಮಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement