ಶಿಕ್ಷಣಕ್ಕೆ ಮುಸ್ಲಿಮರು ಆದ್ಯತೆ ನೀಡಲಿ: ಕಿಮ್ಮನೆ
ಕ.ಪ್ರ.ವಾರ್ತೆ ್ಣ ತೀರ್ಥಹಳ್ಳಿ ್ಣ ಮೇ 12
ಮುಸ್ಲಿಂ ಸಮುದಾಯ ಶಿಕ್ಷಣದಿಂದ ಗೆಲ್ಲುವಂತಾಗಬೇಕು. ನೀವು ಎಷ್ಟು ಹಣ ಸಂಪಾದಿಸುತ್ತೀರಿ ಎಂಬುದಕ್ಕಿಂತ ಎಷ್ಟು ಜನರಿಗೆ ಶಿಕ್ಷಣ ಕೊಡುತ್ತೀರಿ ಎಂಬುದು ಮುಖ್ಯ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟ ಹಮ್ಮಿಕೊಂಡಿದ್ದ ಕಡ್ಡಾಯ ಶಿಕ್ಷಣ ಜಾಗೃತಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದ ಮಾತನಾಡಿದ ಸಚಿವರು, ಇಂದು ಮುಸ್ಲಿಂ ಸಮುದಾಯ ದೇಶದಲ್ಲಿ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ. ದಲಿತ ಸಮುದಾಯಕ್ಕಿಂತಲೂ ಹಿಂದೆ ಉಳಿದಿದೆ. ಸಾಚಾರ್ ಸಮಿತಿಯ ವರದಿಯೂ ಇದನ್ನೇ ಹೇಳಿದೆ ಎಂದರು.
ಸರ್ಕಾರದ ಸವಲತ್ತುಗಳು ಅವಶ್ಯಕತೆ ಇರುವವರಿಗೆ ತಲುಪುವಂತೆ ಮಾಡಲು ಸೂಕ್ತ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ. ಮುಸ್ಲಿಂ ಒಕ್ಕೂಟ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಟಿ.ಎಲ್. ಸುಂದರೇಶ್, ಒಕ್ಕೂಟದ ನಿರ್ದೇಶಕ ಮೊಹಮದ್ ಜಫ್ರುಲ್ಲಾ, ಅಧ್ಯಕ್ಷ ಸುಲೇಮಾನ್ ಸಾಹೇಬ್, ಇಬ್ರಾಹಿಂ ಷರೀಫ್, ಹಾಜಿ ಹುಸೇನ್ ಸಾಬ್, ಜನಾಬ್ ಹಂಝ, ಕಡ್ತೂರು ದಿನೇಶ್, ಜಿ.ಮಹಮದ್ ಇಬ್ರಾಹಿಂ, ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.