ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಶಿವಮೊಗ್ಗ ತಾಲೂಕಿನ ಹಾರನಹಳ್ಳಿ, ಭದ್ರಾವತಿ ತಾಲೂಕಿನ ಅರಬಿಳಚಿ, ಶಿಕಾರಿಪುರ ತಾಲೂಕಿನ ಬಿಳಕಿ, ಹರಿಗೆ, ಮಳವಳ್ಳಿ ಮತ್ತು ಮಾರವಳ್ಳಿ, ತೀರ್ಥಹಳ್ಳಿ ತಾಲೂಕಿನ ಎಡೆಹಳ್ಳಿ, ಸಾಗರ ತಾಲೂಕಿನ ಆನಂದಪುರ, ತಾಳಗುಪ್ಪ, ತುಮರಿ, ಕಾರ್ಗಲ್, ಬಂದಗದ್ದೆ ಮತ್ತು ತಡಕಳಲೆ, ಸೊರಬ ತಾಲೂಕಿನ ಬಾರಂಗಿ, ಎಣ್ಣೆಕೊಪ್ಪ, ಹುಲ್ತಿಕೊಪ್ಪ, ಒಟೂರು, ಗುಡವಿ, ಜಡೆ, ಹೊಸಬಾಳೆ, ಹರಿಶಿ, ಚಂದ್ರಗುತ್ತಿ, ಬೆಟ್ಟದ ಕೊರ್ಲಿ ಮತ್ತು ಆನವಟ್ಟಿ ಹಾಗೂ ಹೊಸನಗರ ತಾಲೂಕಿನ ಮಾರುತಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ನಡೆಯಲಿದೆ.
2008- 9ನೇ ಸಾಲಿನಲ್ಲಿ ಸರ್ಕಾರಿ ಮಹಾವಿದ್ಯಾಲಯಗಳಲ್ಲಿ ಎಂಬಿಬಿಎಸ್ ಕೋರ್ಸಿಗೆ ಸ್ಥಾನ ಪಡೆದು ವ್ಯಾಸಂಗ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಲ್ಲಿಸಿದ ಬಂಧಪತ್ರದನುಸಾರ ಸರ್ಕಾರದಲ್ಲಿ 1 ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಸ್ಥಳ ನೇಮಕಾತಿಗಾಗಿ ಮೇ 20ರಂದು ಬೆಳಗ್ಗೆ 11 ಗಂಟೆಯಿಂದ ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್) ಕೌನ್ಸಿಲ್ ಹಾಲ್‌ನಲ್ಲಿ ಸಂದರ್ಶನ ಏರ್ಪಡಿಸಿಸಲಾಗಿದೆ.
ಅಭ್ಯರ್ಥಿಗಳು ಸಕಾಲದಲ್ಲಿ ಹಾಜರಿದ್ದು, ಸ್ಥಳ ನಿಯುಕ್ತಿ ಪಡೆದುಕೊಳ್ಳಬಹುದಾಗಿದೆ.
ಜಿಲ್ಲೆಯ ವಿವಿಧ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 25 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿದ್ದು, ನಿಯೋಜಿತ ವೈದ್ಯರಿಗೆ ಮಾಸಿಕವಾಗಿ 25000 ಸಂಭಾವನೆ ನೀಡಲಾಗುವುದು.
ಹಾಗೆಯೇ ಅರ್ಹ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬೇರೆ ಜಿಲ್ಲೆಗೆ ಆಯ್ಕೆಯಾಗಬಯಸುವ ವೈದ್ಯರು ಖಾಲಿಹುದ್ದೆ ವಿವರಗಳೊಂದಿಗೆ ಲಿಖಿತ ಮನವಿಯನ್ನು ನೀಡಬಹುದಾಗಿದೆ.
ಆಸಕ್ತರು ವಿವರಗಳಿಗಾಗಿ ಅಂತರ್ಜಾಲ ತಾಣ ಢಿಢಿಢಿ.್ಞಝ್ಠಜಿಢಿ.್ಛ್ಟಟ ವನ್ನು ವೀಕ್ಷಿಸಬಹುದು ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರನ್ನು ಸಂಪರ್ಕಿಸಬಹುದಾಗಿದೆ.