ಎಸ್ಸೆಸ್ಸೆಲ್ಸಿ: ಆನವಟ್ಟಿ ಕಾಲೇಜಿಗೆ ಶೇ.80 ಫಲಿತಾಂಶ
ಸೊರಬ: ಆನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 424 ವಿದ್ಯಾರ್ಥಿಗಳು ಹಾಜರಾಗಿದ್ದು, 337 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ.80 ರಷ್ಟು ಫಲಿತಾಂಶ ದಾಖಲಿಸಿದೆ.
ಉನ್ನತ ಶ್ರೇಣಿ 14, ಪ್ರಥಮ 140, ದ್ವಿತೀಯ 77, ತೃತೀಯ 106 ಸ್ಥಾನ ಪಡೆದಿದ್ದಾರೆ.
ಪ್ರಿಯಾಂಕ ಜಿ.ಎಸ್. 607 ಅಂಕ ಪಡೆದು, ಶೇ.97.12 ಹಾಗೂ ಗಣಿತ ವಿಷಯದಲ್ಲಿ 100 ಅಂಕ ಪಡೆದು, ಶಾಲೆಗೆ ಪ್ರಥಮ ಸ್ಥಾನ ಪಡೆದು, ಶಾಲೆಗೆ ಕೀರ್ತಿ ತಂದಿದ್ದಾಳೆ.
ಪೂಜಾ ಕೆ.ಆರ್ 594 (95.04), ಸೌಜನ್ಯ ಸಿ.ಪಿ. 583 (93.28), ಆದರ್ಶ ಎಂ.ಜೆ. 581 (92.80), ಅಂಬಿಕಾ ಡಿ.ಎಂ. 578 (92.48), ಸೌಜನ್ಯ ಎಸ್. 578 (92.48),
ಅನುಪಾ ಬಿ.ಎಂ. 572(91.52), ಪವನ್ ಎಂ. 557 (89.12), ಮಸ್ಕಾನ್ಭಾನು ಎಸ್. 552 (88.32) ಹೃಷಿಕೇಶ 550 (88.00) ನಿವೇದಿತಾ ಬಿ. 546 (87.36) ನಾಗರಾಜ ಬಿ. 540 (86.40)
ಮಂಜುನಾಥ ಪಿ.ಎಸ್. 539 (86.24) ರಮ್ಯ ಎಂ. 536 (85.76) ಅಂಕ ಗಳಿಸಿ, ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.