ಸಾಮೂಹಿಕ ಸುಂದರಕಾಂಡ ಪಾರಾಯಣ ಯಜ್ಞ
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಭಾರತೀಯ ವಿಚಾರ ವೇದಿಕೆ ಆಶ್ರಯದಲ್ಲಿ ಸಾಮೂಹಿಕ ಸುಂದರ ಕಾಂಡ ಪಾರಾಯಣ ಯಜ್ಞ ಆರಂಭಗೊಂಡಿದ್ದು, ಮೇ 27 ರವರೆಗೆ ನಡೆಯಲಿದೆ.
ಪ್ರತಿದಿನ ಸಂಜೆ 7 ರಿಂದ ಸುಂದರಕಾಂಡ ಸಾಮೂಹಿಕ ಪಾರಾಯಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯುತ್ತಿದೆ.
ಮೇ 28 ಮತ್ತು 29 ರಂದು ವಿದ್ವಾಂಸ ಮೈಸೂರಿನ ಅರಿಯರ್ ಶ್ರೀರಾಮ ಶರ್ಮರಿಂದ ರಾಮಾಯಣ ಕುರಿತ ಉಪನ್ಯಾಸ ನಡೆಯಲಿದೆ. ಸುಂದರ ಕಾಂಡ ಸಾಮೂಹಿಕ ಜಪ ಯಜ್ಞದ ಸಮಾರೋಪವು ಮೇ 31 ಹಾಗೂ ಜೂನ್ 1ರಂದು ನಡೆಯಲಿದ್ದು, ಮೇ 31ರಂದು ಆರಂಭಗೊಳ್ಳುವ ಸುಂದರ ಕಾಂಡ ಹೋಮ ಜೂ.1 ರಂದು ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದೆ.
ಇದೇ ಸಂದರ್ಭ ಅಂದು ಬೆಳಗ್ಗೆ 190 ರಿಂದ ಸೀತಾ ಕಲ್ಯಾಣ ಉತ್ಸವ, ಮಹಾಮಂಗಳಾರತಿ, ಮಹಾ ಪ್ರಸಾದ ವಿನಿಯೋಗವಿದೆ. ಸಂಜೆ 7 ರಿಂದ ದೇವರ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಸತ್ಸಂಗ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ವಿಚಾರ ವೇದಿಕೆಯ ಎಚ್.ಆರ್. ಭಾರ್ಗವ ರಾವ್ ಕೋರಿದ್ದಾರೆ.