ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊರಬೈಲು- ಸನ್ನಿವಾಸ ಸಂಪರ್ಕ ರಸ್ತೆ ಕುಸಿತ

Lingaraj Badiger
Updated On : 19 May 2014, 10:37 am

ಶಿವಮೊಗ್ಗ:  ತಾಲೂಕಿನ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೊರಬೈಲು-ಸನ್ನಿವಾಸ ಗ್ರಾಮದ ಸಂಪರ್ಕ ರಸ್ತೆ ಮಧ್ಯದಲ್ಲಿಯೇ ಕುಸಿತ ಕಂಡಿದ್ದು, ಸಂಚಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ.
ಚೋರಡಿಯಿಂದ ಹೊರಬೈಲು ಮತ್ತು ಸನ್ನಿವಾಸ ಗ್ರಾಮಕ್ಕೆ ಸಾಗುವಲ್ಲಿ ಮಧ್ಯದಲ್ಲಿ ಸಿಗುವ ಹಳ್ಳಕ್ಕೆ ಸೇತುವೆಯನ್ನು ಬಹು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ.
   ಇದು ಕಳೆದ 3 ವರ್ಷಗಳ ಹಿಂದೆಯೇ ಶಿಥಿಲಾವಸ್ಥೆಗೆ ತಲುಪಿತ್ತು. ಆಗಿನಿಂದಲೇ ಸೇತುವೆ ಹಂತ ಹಂತವಾಗಿ ಕುಸಿತ ಕಾಣುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇದೀಗ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ರಸ್ತೆ ಮಧ್ಯದಲ್ಲಿಯೇ ದೊಡ್ಡದಾಗಿ ಗುಂಡಿಬಿದ್ದಿದೆ. ಇದರಿಂದಾಗಿ ವಾಹನಗಳು ಸಂಚರಿಸುವಾಗ ಸ್ವಲ್ಪ ಯಾಮಾರಿದರೂ ಗುಂಡಿಯಲ್ಲಿ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ಈಗಾಗಲೇ ಸಂಪೂರ್ಣ ದುರ್ಬಲವಾಗಿದೆ.  ಈ ಬಾರಿಯ ಮಳೆಗಾಲದಲ್ಲಿ ಪೂರ್ತಿಯಾಗಿ ಕುಸಿದು ಬೀಳುವ ಹಂತದಲ್ಲಿದೆ. ಅಲ್ಲಿ ಹರಿಯುವ ಹಳ್ಳ ಮಳೆಗಾಲದಲ್ಲಿ ಭರ್ತಿಯಾಗಿ ರಸ್ತೆಯ ಮೇಲೆಯೇ ನೀರು ಹರಿಯುತ್ತದೆ. ಈ ಬಾರಿಯ ಮಳೆಗಾಲದಲ್ಲಿ ಹಾಗಾದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ ಎಂಬುದು ಗ್ರಾಮಸ್ಥರ ಆತಂಕ.
ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
 ಈ ಕೂಡಲೇ ಕೂಡಲೇ ಸೇತುವೆಯನ್ನು ದುರಸ್ತಿಪಡಿಸುವಂತೆ ಎರಡೂ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement