ನಕಲಿ ಗೊಬ್ಬರ ಮಾರಾಟ: ಬಂಧನ
ಶಿಕಾರಿಪುರ: ತಾಲೂಕಿನ ಕೆಲವು ಗ್ರಾಮದಲ್ಲಿ ಮುಗ್ಧ ರೈತರನ್ನು ನಕಲಿ ರಸಗೊಬ್ಬರ ಮಾರಾಟದ ಮೂಲಕ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೃಷಿ ಅಧಿಕಾರಿಗಳು ಬಂಧಿಸಿ ಪೊಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ನಾಗಿಹಳ್ಳಿ, ಕುಸ್ಕೂರು ಮತ್ತಿತರ ಗ್ರಾಮಗಳಲ್ಲಿ ಸಮರ್ಥ ಬಯೋಟೆಕ್ನ ಹುಬ್ಬಳ್ಳಿ ಇವರ ಉತ್ಪಾದನೆಯ ಸ್ವರ್ಣಭಾರತಿ ಹೆಸರಿನ ಸೆಟ್ಲೈಟ್ ಎಂಬ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಾರಾಟಗಾರರ ಬಗ್ಗೆ ಅಧಿಕೃತ ಮಾಹಿತಿ ಮೇರೆಗೆ ಇಲ್ಲಿನ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಮಾರಾಟಗಾರರನ್ನು ನಕಲಿ ರಸಗೊಬ್ಬರ ಸಹಿತ ಬಂಧಿಸಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಭಾಕರ್ ತಿಳಿಸಿದ್ದಾರೆ. ಇಂತಹ ಪ್ರಕರಣ ಕಂಡುಬಂದಲ್ಲಿ ದೂ. 08187- 223083ಗೆ ದೂರು ನೀಡುವಂತೆ ಪ್ರಕಟಣೆ ತಿಳಿಸಿದೆ.