ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು
ಶಿವಮೊಗ್ಗ: ನಗರದ ಮಾರ್ನಾಮಿಬೈಲ್ನಲ್ಲಿ ಪಡಿತರ ಅಕ್ಕಿಯನ್ನು ಫಲಾನುಭವಿಯಿಂದ ಖರೀದಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿನ ಗಿರಿಜಮ್ಮ ಕೋಂ ರಾಜು ಮತ್ತು ಮುಶೀರ್ ಹುಸೇನ್ ಬಿನ್ ಜಫರ್ ಹುಸೇನ್ ಅವರು ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾದ ಅಕ್ಕಿಯನ್ನು ಬಿಪಿಎಲ್ ಕಾರ್ಡುದಾರರಿಂದ ಪ್ರತಿ ಕೆಜಿಗೆ 10 ರಂತೆ ಖರೀದಿಸುತ್ತಿದ್ದರು.
ದಾಳಿ ವೇಳೆ ಸಂಗ್ರಹಿಸಿದ್ದ 63 ಸಾವಿರ ಮೌಲ್ಯದ ಸುಮಾರು 21ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡು, ಅವಶ್ಯಕ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ ತಿಳಿಸಿದ್ದಾರೆ.
ದಿಢೀರ್ ದಾಳಿಯಲ್ಲಿ ಶಿವಮೊಗ್ಗ ಅನೌಪಚಾರಿಕ ಪಡಿತರ ಪ್ರದೇಶದ ಕಚೇರಿಯ ಸಹಾಯಕ ನಿರ್ದೇಶಕರು, ಆಹಾರ ನಿರೀಕ್ಷಕರು ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಭಾಗವಹಿಸಿದ್ದರು.