ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಡ ಮೀನುಗಾರರಿಗೆ ಬಲೆ, ಸಲಕರಣೆ ವಿತರಣೆ

Lingaraj Badiger
Updated On : 20 May 2014, 10:45 am

ಶಿವಮೊಗ್ಗ: 2014ನೇ ಸಾಲಿನಲ್ಲಿ ರಾಜ್ಯ ವಲಯ ಯೋಜನೆಯಡಿ ಬಡ ಮೀನು ಶಿಕಾರಿದಾರರಿಗೆ ಮೀನು ಶಿಕಾರಿ ಮಾಡಲು ಅನುಕೂಲವಾಗಿಸಲು ಮೀನು ಹಿಡಿಯುವ ಬಲೆ, ಸಲಕರಣೆ (ಕಿಟ್ ಹಾಗೂ ಫೈಬರ್ ಗ್ಲಾಸ್ ಹರಿಗೋಲು ವಿತರಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.
ಸಲಕರಣೆ ವಿತರಿಸಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮೀನುಗಾರರು ಈ ಯೋಜನೆ ಸಹಾಯಕ. ಇದನ್ನು ಬಳಸಿಕೊಂಡು ಉತ್ತಮ ಮೀನುಗಳನ್ನು ಹಿಡಿದು ಮಾರಾಟ ಮಾಡಿ ಆರ್ಥಿಕವಾಗಿ ಮೇಲೆ ಬರಲು ಸಹಾಯಕ ಎಂದರಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಂತೆ ಕೋರಿದರು.
ಮೀನುಗಾರಿಕೆ ಇಲಾಖೆ ವಲಯ ಮಟ್ಟದ ಮೀನುಗಾರಿಕೆ ಉಪ ನಿರ್ದೇಶಕ ಎಸ್.ಸಿ. ಹೇಮಂತರಾಜು, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ ಖಾನೂಪುರೆ, ಸಹಾಯಕ ನಿರ್ದೇಶಕ ಎನ್.ಎಚ್. ನಂಜುಂಡಪ್ಪ ಮತ್ತಿತರರು ಇದ್ದರು.
ಯೋಜನೆಯಲ್ಲಿ ಗೊಂದಿಚಟ್ನಹಳ್ಳಿ, ಗಾಜನೂರು ಜಲಾಶಯದ ಹಿನ್ನೂರು ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ಚೋರಡಿ ಭಾಗದ ಮೀನು ಶಿಕಾರಿದಾರರಿಗೆ ಮತ್ತು ಮೀನುಗಾರರ ಸಹಕಾರ ಸಂಘದವರಿಗೆ ಈ ಸವಲತ್ತು ವಿತರಿಸಲಾಯಿತು.
ಯೋಜನೆಯಿಂದ ಸವಲತ್ತು ಪಡೆದ ಮೀನುಗಾರರು ತುಂಗಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಹಿಡುವಳಿ ಮಾಡಿದ ತಮ್ಮ ಜೀವನ ಮಟ್ಟ ಸುಧಾರಿಸಲು ಅನುಕೂಲವಾಗುತ್ತದೆ ಎಂಬುದು ಇಲಾಖೆ ಅಧಿಕಾರಿಗಳ ವಿವರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement