ಗಾಯ ಮಾಡಿಕೊಂಡು ಕೈದಿಗಳ ಪ್ರತಿಭಟನೆ
ಶಿವಮೊಗ್ಗ: ಜೈಲಿಗೆ ಒಳಗೆ ಹೊರಗಿನ ಪದಾರ್ಥಗಳನ್ನು ತರುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಹತಾಶೆಗೊಂಡ ಆರು ಕೈದಿಗಳು ತಮ್ಮನ್ನೇ ಗಾಯಗೊಳಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಯಾಸ್ಮಿನ್ ಮತ್ತು ಜಮೀರ್ ಸೇರಿದಂತೆ ಆರು ಜನ ಕೈದಿಗಳು ತೀವ್ರವಾಗಿ ಗಾಯಗೊಂಡಿದ್ದು, ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೂವರಿಗೆ ಜೈಲಿನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಜೈಲಿಗೆ ಮತ್ತು ಆಸ್ಪತ್ರೆಗ ಎಸ್ ಪಿ ಕೌಶಲೇಂದ್ರ ಕುಮಾರ್ ಹಾಗೂ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.
ಕೆಲವು ತಿಂಗಳಿನಿಂದ ಜೈಲಿಗೆ ಆಹಾರ, ಔಷಧಿ ಮತ್ತು ಇತರೆ ವಸ್ತುಗಳನ್ನು ಕೈದಿಗಳ ಸಂಬಂಧಿಕರು ಸರಬರಾಜು ಮಾಡುವುದನ್ನು ತಡೆಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಕೈದಿಗಳು ಹತಾಶರಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.