ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋರಕ್ ಸಿಂಗ್ ವರದಿ ಜಾರಿಗೆ ಎಚ್ಕೆ ಪಾಟೀಲ್‌ಗೆ ಮನವಿ

Rashmi Kasaragodu
Updated On : 24 May 2014, 11:02 am

ಕ.ಪ್ರ.ವಾರ್ತೆ    ಸಾಗರ    ಮೇ 23
ಗೋರಕ್ ಸಿಂಗ್ ವರದಿ ಜಾರಿ ಹಾಗೂ ಭೂಮಿಗೆ ಸಂಬಂಧಪಟ್ಟಂತೆ 94 “Ò’ ಮತ್ತು 192”G’ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ಗ್ರಾಮೀಣಾಭಿವೃಧ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಬುಧವಾರ ತಾಲೂಕಿನ ಮತ್ತಿಕೊಪ್ಪ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಮನವಿ ಸಲ್ಲಿಸಲಾಯಿತು.
ಅಡಕೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ಗೋರಕ್ ಸಿಂಗ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಭೂ ಕಂದಾಯ ತಿದ್ದುಪಡಿ ಕಾಯ್ದೆ 192”G’ ಅಡಿಯಲ್ಲಿ ಕಾಯ್ದೆ ಜಾರಿಯಲ್ಲಿದ್ದು ಈ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ರೆವಿನ್ಯೂ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 44 ಸಾವಿರ ಕುಟುಂಬದ ಮೇಲೆ ಅಕ್ರಮ ಸಾಗುವಳಿ 192”G’ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. 192”G’ ಕಾಯ್ದೆಯನ್ನು ನಗರ ಪ್ರದೇಶದ ಒತ್ತುವರಿದಾರರಿಗೆ ಸೀಮಿತಗೊಳಿಸುವಂತಹ ತಿದ್ದುಪಡಿಯನ್ನು ಮಾಡಿ ಮಲೆನಾಡು ಜಿಲ್ಲೆಯ ರೈತರ, ಕೂಲಿ ಕಾರ್ಮಿಕರ, ಗ್ರಾಮಾಂತರ ಜನರ ಹಿತವನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಅಕ್ರಮ ಸಕ್ರಮ ಕಾಯ್ದೆ 94”Ò’ ಅಡಿಯಲ್ಲಿ ಸರ್ಕಾರ ತಂದಿರುವ ಕಾನೂನು ಗ್ರಾಮಾಂತರ ಪ್ರದೇಶದ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಅನ್ವಯಿಸಿದೆ. ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿರುವ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳಿಗೂ ಮನೆಯ ಹಕ್ಕುಪತ್ರ ಸಿಗುವಂತಹ ರೀತಿಯಲ್ಲಿ ಕಾಯ್ದೆಯನ್ನು ರೂಪಿಸಬೇಕೆಂದು ಕೇಳಿಕೊಳ್ಳಲಾಗಿದೆ.
ಸಾಗರ, ಹೊಸನಗರ ವ್ಯಾಪ್ತಿಯ ಶರಾವತಿ ಹಿನ್ನೀರಿನ ಪ್ರದೇಶದ ವ್ಯಾಪ್ತಿಯಲ್ಲಿ 6 ರಿಂದ 7 ಸಾವಿರ ಕುಟುಂಬಗಳು ಕೆಪಿಸಿ ಲ್ಯಾಂಡ್‌ನಲ್ಲಿ ಮನೆ ಕಟ್ಟಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಮುಳುಗಡೆ ಆಗದೆ ಇರುವಂತಹ ಹೆಚ್ಚುವರಿ ಜಮೀನನ್ನು ಈಗಾಗಲೇ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಕುಟುಂಬಗಳಿಗೆ ಡಿನೋಟಿಫಿಕೇಷನ್ ಮಾಡಿ ಅವರಿಗೆ ಬದುಕುವ ಹಕ್ಕನ್ನು ನೀಡಿ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ಸಿಗುವಂತಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರಸಭೆ ಸದಸ್ಯ ಸುಂದರ್ ಸಿಂಗ್, ಅಬ್ಬಿ ಮಲ್ಲೇಶಪ್ಪ, ಇಂಡುವಳ್ಳಿ ಬಂಗಾರಪ್ಪಗೌಡ, ನಾಗರಾಜ್‌ಗೌಡ, ನಾರಾಯಣ ಜಲ್ಲೆ, ಸ್ವಾಮಿಗೌಡ ಹೆಗ್ಗೋಡು, ಮೋಹನ್ ಸುರೇಶ್ ದಳವಾಯಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement