ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಮಯ್ಯ ಸ್ಮರಣಾರ್ಥ ತುರ್ತು ಚಿಕಿತ್ಸಾ ಘಟಕ ಸ್ಥಾಪನೆ

Rashmi Kasaragodu
Updated On : 24 May 2014, 11:03 am

ಸಚಿವ ಕಿಮ್ಮನೆ ರತ್ನಾಕರ್ ರು. 10 ಲಕ್ಷ ನೆರವು, ರಾಮಯ್ಯಗೆ ನುಡಿನಮನ


ಹೊಸನಗರ: ಇತ್ತೀಚೆಗೆ ನಿಧನ ಹೊಂದಿದ ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್ (ರಾಮಯ್ಯ) ಸ್ಮರಣಾರ್ಥ ನಗರದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪನೆ ಉದ್ದೇಶಿಸಲಾಗಿದ್ದು ಸಚಿವ ಕಿಮ್ಮನೆ ರತ್ನಾಕರ್ 10 ಲಕ್ಷ ನೆರವು ನೀಡಿದ್ದಾರೆ.
ಅವರ ಪರವಾಗಿ ನಗರದಲ್ಲಿ ಶುಕ್ರವಾರ ನಡೆದ ರಾಮಯ್ಯರಿಗೆ ಸಾರ್ವಜನಿಕ ನುಡಿನಮನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಕಿಮ್ಮನೆ ಸಹೋದರರಾದ ಗೋಪಾಲಕೃಷ್ಣ, ದೇವದಾಸ್ ರಾಮಯ್ಯರ ತಾಯಿ ಜಯಲಕ್ಷ್ಮಿ ಎಸ್.ರಾವ್‌ರವರಿಗೆ ನೆರವಿನ ನಗದು ನೀಡಿದರು.
ರಾಮಯ್ಯ ಅಧ್ಯಕ್ಷತೆಯಲ್ಲಿ ಈ ಹಿಂದೆ ಅಸ್ತಿತ್ವಕ್ಕೆ ಬಂದ ಬಿದನೂರು ಸಾಂಸ್ಕೃತಿಕ ವೇದಿಕೆಗೆ ಹಣ ವರ್ಗಾಯಿಸಲಾಗಿದ್ದು ಆ ಮೂಲಕವೆ ಘಟಕದ ಸ್ಥಾಪನೆ ಕಾರ್ಯ ನಡೆಯಲಿದೆ.
ನುಡಿನಮನ: ಇದಕ್ಕು ಮುನ್ನ ಗುಜರಿಪೇಟೆ ಕಲಾಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು ರಾಮಯ್ಯ ಭಾವಚಿತ್ರಕ್ಕೆ ಹೂವು ಹಾಕುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ 2 ನಿಮಿಷಗಳ ಮೌನ ಆಚರಸುವುದರೊಂದಿಗೆ ರಾಮಯ್ಯ ಆತ್ಮಕ್ಕೆ ಶಾಂತಿ ಕೋರಲಾಯಿತು.
ನಂತರ ಮಾತನಾಡಿದ ಸ್ವಾಮಿರಾವ್, ಊರಿನ ಬಗ್ಗೆ ಕಳಕಳಿ ಹೊಂದಿದ್ದ ರಾಮಯ್ಯ ನಗರದ ಆಸ್ತಿಯಾಗಿದ್ದರು. ಕೂಲಿಕಾರ್ಮಿಕರು, ಬಡರೈತರು ಮತ್ತು ದುರ್ಬಲವರ್ಗದವರ ಪಾಲಿಗೆ ಆಪತ್ಬಾಂಧವರಾಗಿದ್ದ ಅವರು ಜನರ ಎಲ್ಲಾ ಸಂಕಷ್ಟಗಳಿಗು ಸ್ಪಂದಿಸುತ್ತಿದ್ದರು ಎಂದರು.
ಎಲ್ಲರಿಗೂ ಸಹಕಾರ: ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸತೀಶಗೌಡ, ರಾಮಯ್ಯ ಯಾವುದೆ ಪಕ್ಷದಲ್ಲಿದ್ದರೂ ಎಲ್ಲ ಪಕ್ಷಗಳಲ್ಲೂ ಅವರ ಅಭಿಮಾನಿಗಳಿದ್ದರು. ಸಹಕಾರ ಕೋರಿ ಬಂದವರ ಪಕ್ಷ ಯಾವುದು ಯಾವ ಜಾತಿ ಎಂದು ನೋಡದ ಅವರು ಎಲ್ಲ ರೀತಿ ಸಹಕಾರ ನೀಡುತ್ತಿದ್ದುದು ಅವರ ದೊಡ್ಡ ಗುಣವಾಗಿತ್ತು ಎಂದರು.
ರಾಮಯ್ಯ ಸಹೋದರ ಕೃಷ್ಣ ಕಾಮತ್, ತಮ್ಮ ರಾಮಿ ಜನರ ಬಗ್ಗೆ ಊರಿನ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಅವನ ಆಶಯ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಲಿದ್ದು ಎಲ್ಲರ ಸಹಕಾರ ಕೋರಿದರು.
ಮುಸ್ಲೀಂ ಧರ್ಮಗುರು ಶಾಹುಲ್ ಹಮೀದ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಹೊಸನಗರದ ಅಧ್ಯಕ್ಷ ಪಟೇಲ ಗರುಡಪ್ಪಗೌಡ, ಎಪಿಎಂಸಿ ಅಧ್ಯಕ್ಷ ಅನಂತರಾವ್ಗುಬ್ಬಿಗ, ಆಪ್ಕೋಸ್ ಸದಸ್ಯ ಕಲ್ಯಾಣಪ್ಪಗೌಡ, ನಗರ ಘಟಕದ ಅಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಪ್ರಕಾಶ್ ರಾವ್, ಚಂದ್ರಶೇಖರ ಉಡುಪ, ಪ್ರಮುಖರಾದ ಅಮ್ರಪಾಲಿ ಸುರೇಶ್, ಕೆಳಕೆರೆ ದಿವಾಕರ್, ಸಂದೀಪ್, ನವೀನ್, ರಾಮಯ್ಯ ತಾಯಿ ಜಯಲಕ್ಷ್ಮಿ ಎಸ್ರಾವ್, ಸಹೋದರ ಅಜಯ ಕಾಮತ್, ಪತ್ನಿ ರಾಧಿಕಾ ರಾಮಯ್ಯ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಯಡೂರು ರಾಜಾರಾಂ ಸ್ವಾಗತಿಸಿದರು. ಸಿ.ವಿ.ಪಾಂಡುರಂಗರಾವ್ ನಿರೂಪಿಸಿದರು. ಗೋಪಾಲಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement