ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎತ್ತಿನ ಗಾಡಿ ಹರಿದು ಬಾಲಕ ಸಾವು

Rashmi Kasaragodu
Updated On : 31 May 2014, 11:59 am

ಸಾಗರ: ತಾಲ್ಲೂಕಿನ ಆನಂದಪುರಂ  ಹೋಬಳಿ ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಖೈರಾ ಗ್ರಾಮದಲ್ಲಿ ಎತ್ತಿನ ಗಾಡಿ ಚಕ್ರ ಮೈಮೇಲೆ ಹರಿದು ಮೂರನೆ ತರಗತಿ ಬಾಲಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಖೈರಾ ಗ್ರಾಮದ ಮಲ್ಲಿಕ ಗೌಡ ಎಂಬುವವರು ತಮ್ಮ ಜಮೀನಿನಿಂದ ಜೋಳವನ್ನು ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ಮನೆಗೆ ತರುತ್ತಿದ್ದರು. ಜೋಳದ ರಾಶಿಯ ಮೇಲೆ ಅವರ ಮಗ 3ನೇ ತರಗತಿ ವಿದ್ಯಾರ್ಥಿ ಸುಭಾಷ್ (9) ಎಂಬಾತ ಕುಳಿತುಕೊಂಡಿದ್ದನು. ಗದ್ದೆಯ ಹಾಳೆಯನ್ನು ದಾಟುವಾಗ ಗಾಡಿಯಿಂದ ಬಾಲಕ ಸುಭಾಷ್ ಆಯತಪ್ಪಿ ಬಿದ್ದಿದ್ದು, ಆತನ ಮೇಲೆ ಗಾಡಿ ಚಕ್ರ ಹತ್ತಿದೆ.
ತಕ್ಷಣ ಆತನಿಗೆ ಆನಂದಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement