ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮದುವೆ ಬರೀ ಸಂಪ್ರದಾಯವಲ್ಲ, ಜೀವನದ ಸಂಸ್ಕಾರ

Rashmi Kasaragodu
Updated On : 31 May 2014, 12:02 pm

ಶಿವಮೊಗ್ಗ: ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಶುಕ್ರವಾರ ಸರ್ವಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಹಮ್ಮಿಕೊಂಡ 28ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 15 ಜೋಡಿ ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮದುವೆ ಎಂದರೆ ಕೇವಲ ಸಂಪ್ರದಾಯವಲ್ಲ, ಅದು ಜೀವನದ ಸಂಸ್ಕಾರ ಎಂದರು. ಗಂಡು- ಹೆಣ್ಣಿನ ನಡುವೆ ಮದುವೆ ಸಾಮಾಜಿಕವಾಗಿ ಒಂದು ಕುಟುಂಬ ವ್ಯವಸ್ಥೆ ಭದ್ರಗೊಳಿಸುವ ವೇದಿಕೆ. ಹಾಗೆಯೇ ಎರಡು ಕುಟುಂಬದ ಮಧ್ಯೆ ಮಾನಸಿಕವಾಗಿ ಬಾಂಧವ್ಯ ಬೆಸೆಯುತ್ತದೆ ಎಂದ ಹೇಳಿದ ಅವರು, ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರಿತು ಜೀವನ ಸಾಗಿದಾಗ ಮಾತ್ರ ಯಾವುದೇ ಅಡಚಣೆಯಿಲ್ಲದೆ ಸಂಸಾರವೆಂಬ ರಥ ಮುಂದೆ ಸಾಗಲು ಸಾಧ್ಯ ಎಂದು ಹೇಳಿದರು.
ಸಮನ್ವಯ: ಸತಿ- ಪತಿ ಇಬ್ಬರು ಒಂದೇ ಮನಸ್ಸಿನಿಂದ ಜೀವನ ಸಾಗಿಸಬೇಕು. ಸಂಸಾರದಲ್ಲಿ ಸುಖ- ದುಃಖ ಎರಡೂ ಎದುರಾಗುತ್ತದೆ. ಅದನ್ನು ದಿಟ್ಟತನದಿಂದ ಎದುರಿಸುವ ಧೈರ್ಯ ಇಬ್ಬರಲ್ಲೂ ಇರಬೇಕು. ದಾಪತ್ಯದಲ್ಲಿ ಮುಖ್ಯವಾಗಿ ಸಮನ್ವಯತೆ ಇದ್ದರೆ ಜೀವನ ಸುಖಕರವಾಗಿರುತ್ತದೆ ಎಂದು ಹೇಳಿದರು. ಮದುವೆ ಎಂಬುದು ಸಾಮಾಜಿಕವಾಗಿ ಒಂದು ಕುಟುಂಬ ವ್ಯವಸ್ಥೆ ಭದ್ರಗೊಳಿಸುವ ವೇದಿಕೆ ಎಂದರಲ್ಲದೇ, ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬ ಎಂಬ ಪರಿಕಲ್ಪನೆ ನಮ್ಮಿಂದ ಮರೆಯಾಗುತ್ತಿದೆ. ಕುಟುಂಬವೆಂದರೆ ಕೇವಲ ಗಂಡ, ಹೆಂಡತಿ, ಮಕ್ಕಳು ಇಲ್ಲಿಗೆ ಕೊನೆಗೊಳ್ಳುತ್ತದೆ. ಹೀಗಾಗಿ ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ಮರೆಯಾಗುತ್ತಾ ಸ್ವಾರ್ಥ ಹೆಚ್ಚಾಗುತ್ತಿದೆ. ತುಂಬು ಕುಟುಂಬದ ಪರಿಕಲ್ಪನೆ ಮರೆತು ಸದಾ ಹಣ, ಅಧಿಕಾರದ ಬೆನ್ನು ಹತ್ತಿರುವುದರ ಪರಿಣಾಮ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಜೀವನ ಮೌಲ್ಯ: ಅವಿಭಕ್ತ ಕುಟುಂಬ ಮರೆಯಾಗುತ್ತಿರುವುದರ ಪರಿಣಾಮ ಹಿರಿಯರನ್ನು ನೋಡಿಕೊಳ್ಳುವವರೇ ಇಲ್ಲವೆಂಬಂತಾಗಿದೆ. ವೃದ್ಧಾಶ್ರಮಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಇಂದಿನ ಮಕ್ಕಳಿಗೆ ಸಂಸ್ಕಾರಯುತ ಜೀವನ ಮೌಲ್ಯ ಕಲಿಸಬೇಕು. ಮುಂದಿನ ಸಮಾಜಕ್ಕೆ ಉತ್ತಮ ಪೀಳಿಗೆಯನ್ನು ಕೊಡುಗೆಯಾಗಿ ನೀಡಬೇಕೆಂದರು. ಸರ್ವಸಿದ್ಧಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಡಿ.ಎಚ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಮೇಯರ್ ಖುರ್ಷಿದಾಬಾನು, ಉಪಮೇಯರ್ ರೇಖಾ ಚಂದ್ರಶೇಖರ್, ಎಸ್.ಪಿ. ಶೇಷಾದ್ರಿ, ವೇಣುಗೋಪಾಲ್, ಸತ್ಯನಾರಾಯಣ್, ದತ್ತಾತ್ರಿ ಮತ್ತಿತರರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement