ಶಂಕರಮಠ ರಸ್ತೆ ಹೆಸರಿಡಲು ಆಗ್ರಹ
ಭದ್ರಾವತಿ: ಪಟ್ಟಣದ ಹೊಸ ಸೇತುವೆ ರಸ್ತೆಗೆ ಶೃಂಗೇರಿ ಶಂಕರಮಠ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಡಿ.ದೇವರಾಜ ಅರಸು ಜನಸ್ಪಂದನ ವೇದಿಕೆ ನಗರಸಭಾಧ್ಯಕ್ಷರನ್ನು ಒತ್ತಾಯಿಸಿದೆ.
ಈ ಬಗ್ಗೆ ಸಾರ್ವಜನಿಕರಿಂದ ವೇದಿಕೆಗೆ ಮನವಿಗಳು ಬಂದಿದ್ದು ಮತ್ತೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒತ್ತಾಯಗಳು ಬಂದಿದ್ದು ಈ ವಿಷಯಗಳು ಕುರಿತಂತೆ ಜೂ.2ರಂದು ನಡೆಯಲಿರುವ ನಗರಸಭೆಯ ಮಾಸಿಕ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿ ವೇದಿಕೆಯ ಅಧ್ಯಕ್ಷ ಆರ್.ವೇಣುಗೋಪಾಲ್ ಒತ್ತಾಯಿಸಿದ್ದಾರೆ.
ಸಿದ್ದಾಪುರ ಬೈಪಾಸ್ ರಸ್ತೆಯಲ್ಲಿರುವ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ವೃತ್ತವೆಂದು ನಾಮಕರಣ ಮಾಡಬೇಕು. ಬೈಪಾಸ್ ರಸ್ತೆಯಲ್ಲಿ ನಿಸರ್ಗ ಡಾಬಾ ಬಳಿ ಇರುವ ವೃತ್ತಕ್ಕೆ ಹಿಂದುಳಿದ ವರ್ಗದ ರೂವಾರಿಯಾಗಿದ್ದ ಡಿ. ದೇವರಾಜ ಅರಸು ವೃತ್ತವೆಂದು ನಾಮಕರಣ ಮಾಡಬೇಕೆಂದು ಈ ಹಿಂದೆಯೇ ನಗರಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದರಿಂದ ಅದನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಅವರು ಒತ್ತಾಯಿಸಿದ್ದಾರೆ.