ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಚ್ಛ ಪರಿಸರದಿಂದ ಆರೋಗ್ಯ ಭಾಗ್ಯ

Rashmi Kasaragodu
Updated On : 31 May 2014, 12:03 pm

ಶಿರಾಳಕೊಪ್ಪ: ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ವಾಂತಿ, ಭೇದಿ ಸಮಸ್ಯೆ ಮತ್ತು ವೈರಲ್ ಫೀವರ್ ಪ್ರಕರಣ ಕಂಡುಬರುತ್ತಿದೆ. ವಿಶೇಷವಾಗಿ ಡೆಂಘೀಜ್ವರ ನಿರ್ಲಕ್ಷ್ಯೆಯಿಂದ ಸಾವು ಸಹ ಸಂಭವಿಸುವ ಸಾಧ್ಯತೆ ಇದ್ದು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಾ. ವೈದ್ಯಾಧಿಕಾರಿ ನಾಗರಾಜ್ ನಾಯಕ್ ಎಚ್ಚರಿಸಿದರು.
ರೋಗಗಳ ತಾಣದ ಪಟ್ಟಣ ಎಂದು ಜಿಲ್ಲಾ ಆರೋಗ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಪಟ್ಟಣದ ವಿವಿಧ ಭಾಗಗಳಲ್ಲಿ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ನಾಗರೀಕರೊಂದಿಗೆ ಎಚ್ಚರಿಕೆ ಕೊಡುತ್ತಾ ಸಮರೋಪಾದಿಯಲ್ಲಿ ಲಾರ್ವಾ ನಾಶಪಡಿಸಿ ಅಲ್ಲಿಯ ನಿವಾಸಿಗಳಿಗೆ ಮಾಹಿತಿ ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಮಯದಲ್ಲಿ ಚಿಕೂನ್ ಗುನ್ಯಾ, ಡೆಂಘೀ, ಮಲೇರಿಯಾ ಮತ್ತಿತರ ಕಾಯಿಲೆಗಳು ಹೆಚ್ಚಾಗಿ ಹರಡುತ್ತವೆ. ಆ ಎಲ್ಲ ಕಾಯಿಲೆಗಳು ಸೊಳ್ಳೆಯಿಂದ ಹರಡುತ್ತವೆ. ವಿವಿಧ ಆಸ್ಪತ್ರೆಗಳಲ್ಲಿ ಜ್ವರದಿಂದ ಪ್ಲೇಟ್‌ಲೆಟ್ಸ್ ಕಡಿಮೆ ಆಗಿರುವ ಸಂಗತಿಗಳು ಬರುತ್ತಿವೆ ಎಂದು ವಿವರಿಸಿದರು.
ಕೊಳಚೆ ಬಗ್ಗೆ ಎಚ್ಚರ:  ಪಟ್ಟಣದ ಮಠದ ಗದ್ದೆ ಭಾಗದಲ್ಲಿ ಮನೆಮುಂದೆ ಕೊಚ್ಚೆ ಮಾಡಿಕೊಂಡವರಿಗೆ ಮಾಹಿತಿ ಕೊಟ್ಟು ಸ್ಥಳದಲ್ಲಿ ಕೊಚ್ಚೆ ತೆಗೆಸಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಅದನ್ನು ತೆರವು ಮಾಡಲು ಪಪಂ ಮುಖ್ಯಾಧಿಕಾರಿ ರಾಜ್‌ಕುಮಾರ್, ಸೊಳ್ಳೆ ಕಾಟ ನಿಯಂತ್ರಿಸಲು ಡಿಡಿಟಿ ಪುಡಿ ಸಿಂಪರಣೆ ಮಾಡಲು ತಿಳಿಸಿದರು. ಕೊಳೆತ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕೇರಿಗಳಲ್ಲಿ ಸಭೆ ನಡೆಸಿ ನಾಗರೀಕರು ಬಿಸಿ ಊಟ ಸಿದ್ದಪಡಿಸಿ ಕೊಂಡು ಊಟ ಮಾಡಬೇಕು. ಹಳಸಿದ ಪದಾರ್ಥವನ್ನು ಬಳಸದಂತೆ ಎಚ್ಚರಿಸಿದರು.
ಹೊಟೇಲ್‌ಗಳಿಗೆ ನೋಟಿಸ್:  ಪಟ್ಟಣದ ಹೊಟೇಲ್‌ಗಳಿಗೆ ಪಪಂ ನೋಟಿಸ್ ಕೊಟ್ಟು, ಹೊಟೇಲ್‌ಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.
ಜಮೀಲಾ ಖಾತೂನ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಯ್ಕ ಹಾಗು ಆರೋಗ್ಯಾ ಇಲಾಖೆ ಸಿಬ್ಬಂದಿ ಮತ್ತು ಪಪಂ ಸಿಬ್ಬಂದಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement